ಪಡುಬಿದ್ರಿ: ಹೆಜಮಾಡಿ ಮಟ್ಟು ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಪಡುಬಿದ್ರಿ ಪೊಲೀಸರು ಎಪ್ರಿಲ್ 17ರ ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ.
ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (112)ಯ 6ನೇ ವಾಹನದಲ್ಲಿ ಗಸ್ತು ಹಾಕುತ್ತಿದ್ದ ಪೊಲೀಸರು ಮಡು ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪರಿಶೀಲನೆ ನಡೆಸಿದಾಗ, ಪರವಾನಿಗೆ ಇಲ್ಲದೆ ಸುಮಾರು 2 ಯೂನಿಟ್ ಅಕ್ರಮ ಮರಳು ಸಾಗಿಸಲಾಗುತ್ತಿದ್ದು, ಅದರ ಮೌಲ್ಯವು ಅಂದಾಜು ರೂ. 7000 ಇರುವುದಾಗಿ ತಿಳಿದುಬಂದಿದೆ.
ಪೊಲೀಸರನ್ನು ಕಂಡ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ದಾಖಲೆಗಳು ಟಿಪ್ಪರ್‌ನಲ್ಲಿ ಲಭ್ಯವಿಲ್ಲದ ಕಾರಣ, ವಾಹನವನ್ನು ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ತಮಿಳಿನ ಮಾಸ್ತರ್ ಸ್ಟೈಲ್ ನಟ ಅಜಿತ್ ಕುಮಾರ್ ಅವರು ಕೇವಲ ನಟನಲ್ಲ, ಕಾರ್ ಹಾಗೂ ಬೈಕ್ ರೇಸಿಂಗ್ ಕುರಿತಾದ ಪ್ರೀತಿ…
ಕುಂದಗೋಳ: ಗ್ರಾಮ ಅಂದಮೇಲೆ ಮೂಲ ಸೌಕರ್ಯಗಳು ಇರಬೇಕು. ರಸ್ತೆ ಚರಂಡಿ. ಶುದ್ದ ಕುಡಿಯುವ ನೀರು ಇರಲೇಬೇಕು ಆದರೆ ಇಲ್ಲೊಂದು ಗ್ರಾಮದಲ್ಲಿ…
ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಸಿಎ ಓದುತ್ತಿದ್ದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ…
ಇಟಲಿ ಸರ್ಕಾರ ಕೈದಿಗಳ ಮಾನಸಿಕ ಹಾಗೂ ವೈಯಕ್ತಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಜೈಲು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಹಾಕಿದೆ. ಜೈಲಿನೊಳಗಿನ ಮಾನವೀಯತೆಯನ್ನು…
ಒಂದು ಕಾಲದಲ್ಲಿ ಟಿ20 ಕ್ರಿಕೆಟ್‌ನ ‘ಮ್ಯಾಜಿಕ್ ಮ್ಯಾನ್’ ಎನಿಸಿಕೊಂಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್‌ನ ಆಟ ಈಗ ಕಳೆಯುತ್ತಿರುವ ಹಳೆಯ ಚಂದನದ ಬಾವಿಗಿಂತಲೂ…
ರಾಮನಗರ: ಅಂಧಕಾರು ರಾತ್ರಿ ಬೆನ್ನಲ್ಲೇ ನಡೆದ ಗುಂಡಿನ ದಾಳಿ ಪ್ರಕರಣವು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ…