ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಿರಾಣಿ ಅಂಗಡಿಗಳು ಹಾಗೂ ಪಾನ್ ಶಾಪ್ ಗಳಲ್ಲಿ ಸಹ ಮದ್ಯ ದೊರೆಯುತ್ತಿದೆ. ಬೇನಾಳ ಆರ್ ಸಿ ಗ್ರಾಮದ ಅಂಗಡಿಗಳಿಗೆ ಒಟಿ, ಬಿಪಿ, ವಿಸ್ಕಿ ಮುಂತಾದ ಬ್ರ್ಯಾಂಡ್ ಗಳನ್ನು ಆಲಮಟ್ಟಿ ಮಾರ್ಗದಿಂದ ಬಂದು ಬೇನಾಳ ಗ್ರಾಮ ಹಾಗೂ ಚಿಮ್ಮಲಗಿ ಗಣಿ ಮುಂತಾದ ಗ್ರಾಮಗಳಿಗೆ KA 29 A 7515 ನಂಬರ್ ನ ಆಟೋದಲ್ಲಿ ದಿನಾಲೂ ಗ್ರಾಮದ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪುರೈಕೆ ಮಾಡುತ್ತಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಭ್ರಷ್ಟರ ಬೇಟೆ ಪತ್ರಿಕೆಯ ವರದಿಗಾರರು ಇಂದು ಮುಂಜಾನೆ ಅಕ್ರಮವಾಗಿ ಮದ್ಯಪೂರಕ್ಕೆ ಮಾಡುತ್ತಿರುವ ಆಟೋವನ್ನು ಹಿಡಿದು ಪ್ರಶ್ನಿಸಿರುತ್ತಾರೆ. ಆತ ನನಗೆ ಲೈಸೆನ್ಸ್ ಕೊಟ್ಟಿದ್ದಾರೆ ನಾನು ಎಲ್ಲಾ ಕಡೆ ಪೂರೈಕೆ ಮಾಡಬಹುದು ಎಂದು ಹೇಳಿಕೊಂಡಿರುತ್ತಾನೆ. ಈ ರೀತಿ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪೂರೈಕೆ ಮಾಡಲು ಅನುಮತಿ ಕೊಟ್ಟವರು ಯಾರು?

ರಾಜಾರೋಷವಾಗಿ ನನಗೆ ಅನುಮತಿ ಕೊಟ್ಟಿದ್ದಾರೆ ನಾನು ಪೂರೈಕೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದರೆ ಇವನಿಗೆ ಇಷ್ಟು ಧೈರ್ಯ ಬರಲು ಅಧಿಕಾರಿಗಳೇ ಕಾರಣಾನಾ? ರಾಜ ರೋಷವಾಗಿ ಈ ರೀತಿ ಬೆಳಗಿನ ಹೊತ್ತೆ ಅಕ್ರಮ ಮದ್ಯವನ್ನು ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದರು ಸಹ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಏನೆನ್ನಬೇಕು? ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಿಟ್ಟು ಅಧಿಕಾರಿಗಳೇನು ಕಮಿಷನ್ ಲೆಕ್ಕ ಹಾಕುತ್ತಿದ್ದಾರಾ? ಅಥವಾ ನಮಗೇಕೆ ಎಂದು ನಿದ್ದೆ ಮಾಡುತ್ತಿದ್ದಾರಾ?

ಪ್ರತಿಯೊಂದು ಹಳ್ಳಿಗಳಿಗೆ ಈ ರೀತಿ ಮದ್ಯವನ್ನು ಪೂರೈಕೆ ಮಾಡಿದರೆ ಅಲ್ಲಿನ ಜನರು ಕುಡಿದು ಹಾಳಾಗಿ ಅವರ ಕುಟುಂಬ ಬೀದಿಗೆ ಬಂದರೆ ನೋಡುವವರು ಯಾರು?  ಬಾಗೇವಾಡಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ?

ವರದಿ: ಸಂಗಪ್ಪ ಚಲವಾದಿ

 

error: Content is protected !!