ನಂಜನಗೂಡು: ನಂಜನಗೂಡು ತಾಲೂಕು ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು ಅವರ ಆದೇಶದ ಮೇರೆಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ
ಇಪ್ಪತ್ತಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಠಾಣೆಗೆ ಕರೆಯಿಸಿ ವೃತ ನಿರೀಕ್ಷಕ ಚಂದ್ರಶೇಖರ್ ಮತ್ತು ಹುಲ್ಲಹಳ್ಳಿ ಪಿಎಸ್ಐ ಚೇತನ್ ಕುಮಾರ್ ಸಭೆ ನಡೆಸಿದ್ದಾರೆ ಸುಮಾರು 20ಕ್ಕೂ ಹೆಚ್ಚು ಮೈಕ್ರೋಸ್ ಫೈನಾನ್ಸ್ ಸಿಬ್ಬಂದಿಗಳು ಸಭೆಯಲ್ಲಿ ಭಾಗಿ ಯಾಗಿದ್ದರು
ಹುಲ್ಲಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಹಲವಾರು ಹಳ್ಳಿಗಳ ನೂರಾರು ಕುಟುಂಬಗಳಿಗೆ ನೀಡಿರುವ ಸಾಲದ ವಿವರವನ್ನು ಕೇಳಿ ಮಾಹಿತಿ ಪಡೆದ ಪೊಲೀಸರು
ಕೂಲಿ ಕಾರ್ಮಿಕರಿಗೆ ಸಾಲ ನೀಡುವ ಮುನ್ನ ನೀವು ಸಾಲ ವಸೂ ಲಾತಿಯಲ್ಲೂ ತಮ್ಮ ಜವಾಬ್ದಾರಿ ಹಾಗೂ ಕಠಿಣ ಕ್ರಮದ ಬಗ್ಗೆ ಮಾಹಿತಿಯನ್ನು ಏಕೆ ತಿಳಿಸುವುದಿಲ್ಲ
ಸಾಲ ನೀಡಿದ ಮೇಲೆ ಕಿರುಕುಳದ ಅವಶ್ಯಕತೆ ಏಕೆ ? ಸಾಲ ನೀಡಿದ್ದೇವೆ ಎಂದು ಒಬ್ಬಂಟಿ ಮಹಿಳೆಯರ ಮನೆಗೆ ಹೋಗಿ ದಮ್ಕಿ ಹಾಕುವುದು ಎಷ್ಟರ ಮಟ್ಟಿಗೆ ಸರಿ ?
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಾದ ನೀವು ಕೂಲಿ ಕಾರ್ಮಿಕರು ಬಡ ರೈತರಿಂದ ಸಾಲ ನೀಡಿ ಎಷ್ಟು ಪರ್ಸೆಂಟ್ ಬಡ್ಡಿಯನ್ನು ತೆಗೆದುಕೊಳ್ಳುತ್ತಿದ್ದೀರಿ
ನೀವು ತೆಗೆದುಕೊಳ್ಳುವ ಬಡ್ಡಿಯ ಮಾಹಿತಿಯನ್ನು ಆರ್ ಬಿ ಐ ಅಥವಾ ತಾಲೂಕು ದಂಡಾಧಿಕಾರಿಗಳು ಇಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೀರಾ ?ನಿಮ್ಮ ಕಿರುಕುಳ ತಾಳಲಾರದೆ ನೀವು ಸಾಲ ನೀಡಿದ ಎಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ ಮನೆಯನ್ನು ತೊರೆದು ನಾಪತ್ತೆಯಾಗಿದ್ದಾರೆ ? ಎಂದು
ಖಾಸಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಹತ್ತು ಹಲವು ಪ್ರಶ್ನೆಗಳ ಸುರಿಮಳೆಗೈದು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಚಾರ್ಜ್ ಮಾಡಿದ್ದಾರೆ.ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸನೂರು ರವರ ಆದೇಶದ ಮೇರೆಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸಭೆ ಮಾಡಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಬೆವರಳ್ಳಿಸಿದ್ದಾರೆ ಹುಲ್ಲಹಳ್ಳಿ ಪೊಲೀಸರು.ಪೊಲೀಸರ ಖಡಕ್ ಎಚ್ಚರಿಕೆಗೆ ತಬ್ಬಿಬಾದ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಾದ ನೀವು ಸಾಲ ನೀಡಿದ್ದೀರಿ ಆದರೆ ಅದನ್ನು ಕಾನೂನು ಬದ್ಧವಾಗಿ ವಸೂಲಾತಿಗೆ ಮುಂದಾಗಬೇಕು
ಸಾಲ ನೀಡಿದ್ದೇವೆ ಎಂದು ಯಾವುದೇ ದರ್ಪ, ಕಿರುಕುಳ ನೀಡಬಾರದು ಅವರ ಮನೆಯ ಮುಂಭಾಗಕ್ಕೆ ಹೋಗಿ ಬೆದರಿಕೆ ಹಾಕುವುದಾಗಲಿ ನೋಟೀಸ್ ಅಂಟಿಸುವುದಾಗಲಿ ಮಾಡಬಾರದು
ಹಾಗೇನಾದರೂ ಮಾಹಿತಿ ಕಂಡು ಬಂದಲ್ಲಿ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ವೃತ್ತ ನಿರೀಕ್ಷಕ ಚಂದ್ರಶೇಖರ್, ಪಿಎಸ್ಐ ಚೇತನ್ ಕುಮಾರ್ ದಫೆದಾರ್ ದೊಡ್ಡಯ್ಯ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. ಬಡವರ ರಕ್ತ ಹೀರುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಗ್ರಾಮವನ್ನೆ ತೊರೆದ ಸಾಲಗಾರರು ಕಣ್ಮುಚ್ಚಿ ಕುಳಿತ ಜಿಲ್ಲಾ ಆಡಳಿತ ಮತ್ತು ಸರ್ಕಾರ ಎಂಬ ಶೀರ್ಷಿಕೆ ಯಡಿ ನಮ್ಮ ಪತ್ರಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು ಸುದ್ದಿಯ ಫಲಶೃತಿಯಿಂದಾಗಿ ಜಿಲ್ಲಾ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು ಪೊಲೀಸರಿಂದ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ವರದಿ: ಮೋಹನ್

Leave a Reply

Your email address will not be published. Required fields are marked *

Related News

error: Content is protected !!