ನಂಜನಗೂಡು :ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಹಾಗೂ ಯಡಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭ್ರಷ್ಟ ಪಿಡಿಒ ನಾಗರಾಜು ಎಂಬುವವರನ್ನು ಅಮಾನತ್ತು ಗೊಳಿಸುವಂತೆ ಒತ್ತಾಯಿಸಿ ಏಕೀಕರಣದ ಹಾದಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ನಂಜನಗೂಡು ತಾಲೂಕು ಪಂಚಾಯಿತಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭ್ರಷ್ಟ ಪಿಡಿಓ ರನ್ನು ಕೂಡಲೆ ಅಮಾನತುಗೊಳಿಸುವಂತೆ ಒತ್ತಾಯಿಸಿ ಆತನ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಅವರು ಮಾತನಾಡಿ ಯಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾರ್ವತಿಪುರ ಗ್ರಾಮದ ವೃದ್ಧ ಮಹಿಳೆ ಮಾರಿಯಮ್ಮ ಎಂಬುವವರ ಜಾಗಕ್ಕೆ ಸಂಬಂಧಿಸಿದಂತೆ 11 ಬಿ ನೀಡಿ ಖಾತೆ ಮಾಡಿಸಿಕೊಡಲು 25,000 ಪಡೆದಿರುತ್ತಾರೆ .ಆಕೆಯಿಂದ ಲಂಚದ ಹಣ ಪಡೆದಿದ್ದರೂ ಸಹ ಅದೇ ಜಾಗವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟು ವಂಚನೆ ಮಾಡಿರುತ್ತಾರೆ.ಅಲ್ಲದೆ ಯಡಿಯಾಲ ಗ್ರಾಮದಲ್ಲಿ ಕನಕ ಭವನಕ್ಕೆ ಸೇರಬೇಕಾದ ಜಾಗವನ್ನು ಹಣಕ್ಕಾಗಿ ಬೇರೆ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.ಈ ಹಿಂದೆ ಕಳಲೆ ಗ್ರಾಮ ಪಂಚಾಯಿತಿಯಲ್ಲೂ ಕೂಡ ಹಲವರು ಭ್ರಷ್ಟಾಚಾರಗಳನ್ನು ಮಾಡಿ ಬಂದಿದ್ದಾರೆ .ಪ್ರಸ್ತುತ ಈಗ ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೂಡ ಸರ್ಕಾರಿ ರಸ್ತೆಯನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದ್ದು ಈ ವ್ಯಕ್ತಿ ಯಾವುದೇ ಪಂಚಾಯತಿಗೆ ಹೋದರು ಹೋದ ಕಡೆಯೆಲ್ಲ ಭ್ರಷ್ಟಾಚಾರ, ಅಕ್ರಮ ಮಾಡುವುದು ಮಾಮೂಲಿಯಾಗಿದೆ ಎಂದು ಆರೋಪಿಸಿದರು .ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಹಾಗೂ ನಾನು ಇಬ್ಬರು ಒಂದೇ ಗ್ರಾಮದವರಾಗಿದ್ದು ಆತ್ಮೀಯರಾಗಿದ್ದೇವೆ ನಾನು ಏನೇ ಮಾಡಿದರು ಅವರ ಬೆಂಬಲ ಇದೆ ಎನ್ನುವ ಉಡಾಫೆ ಮಾತುಗಳನ್ನಾಡುತ್ತಾ ರಾಜಕಾರಣಿಯಂತೆ ಮೆರೆಯುತ್ತಾನೆ ಎಂದು ಆರೋಪಿಸಿದ ಅವರು ಉಸ್ತುವಾರಿ ಸಚಿವರೇ ಇಂತಹ ಪಿಡಿಒಗಳು ನಂಜನಗೂಡಿಗೆ ಅವಶ್ಯಕತೆ ಇಲ್ಲ ಬಡವರ ರಕ್ತ ಹೀರುವ ಹಾಗೂ ಸರ್ಕಾರಿ ಜಾಗಗಳನ್ನು ಮಾರಾಟ ಮಾಡುವ ಇಂತಹ ಬ್ರಷ್ಟ ಪಿಡಿಒಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು .ಒಂದು ವೇಳೆ ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಪಿಡಿಒಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಹಾಗೂ ಸಾರ್ವಜನಿಕರ ರಸ್ತೆಗಳನ್ನು ಬೇರೆಯವರ ಹೆಸರಿಗೆ ಅಕ್ರಮ ಖಾತೆ ಮಾಡಿಕೊಡುತ್ತಿದ್ದಾರೆ ಇವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದರು .
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಜಲಾಲ್ಡ್ ಭೇಟಿ ನೀಡಿ ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸಿ ಸ್ಥಳಕ್ಕೆ ಪಿಡಿಒ ನಾಗರಾಜ್ ಅವರನ್ನು ಕರೆಯಿಸಿ ರೈತರ ಆರೋಪದ ಸಂಬಂಧ ವಿಚಾರಣೆ ನಡೆಸಿ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈ ಬಿಡಲಾಯಿತು .
ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹಿಮ್ಮಾವು ರಘು,ಶ್ವೇತಾ, ದೇವರಾಜು, ರವಿ, ಶಂಕರ್ ನಾಯ್ಕ, ಮಹಾದೇವನಾಯಕ, ಮಹಾದೇವಸ್ವಾಮಿ, ಪ್ರಕಾಶ್ ,ಆನಂದ್, ಸಿದ್ದರಾಜು ,ಮಹೇಶ್, ಶಿವಕುಮಾರ್, ಸಂತ್ರಸ್ತ ಮಹಿಳೆ ಮಾರಿಯಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
“ ಭ್ರಷ್ಟ ಪಿಡಿಒ ಗೆ ಎರಡೆರಡು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಯೋಗ ಇದರಿಂದಾಗಿ ನಾಗರಾಜ್ ಪ್ರಸ್ತುತ ನಂಜನಗೂಡು ತಾಲೂಕಿನ ಹೆಗ್ಗಡಳ್ಳಿ ಹಾಗೂ ಯಡಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡೂ ಪಂಚಾಯಿತಿಗಳಲ್ಲಿ ಸಾಕಷ್ಟು ಹಗರಣಗಳನ್ನು ಮಾಡಿ ಭ್ರಷ್ಟತೆಗೆ ಹೆಸರುವಾಸಿಯಾಗಿದ್ದಾರೆ .ಕೇವಲ ಹಾಜರಾತಿಗೆ ಸಹಿ ಮಾಡಿ ಹೊರಟು ತನ್ನ ಸ್ವಂತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಇವರು ಸಾರ್ವಜನಿಕ ಕೆಲಸಗಳಿಗೆ ಸಿಗುವುದಿಲ್ಲ ಈ ಪಂಚಾಯಿತಿಯಲ್ಲಿ ಕೇಳಿದರೆ ಆ ಪಂಚಾಯಿತಿ ಆ ಪಂಚಾಯಿತಿಗೆ ಕೇಳಿದರೆ ಈ ಪಂಚಾಯಿತಿ ಎಂದು ಹೇಳಿಕೊಂಡೆ ಭ್ರಷ್ಟಾಚಾರ ನಡೆಸುತ್ತಿರುವ ಇವರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದಾದರೂ ಒಂದು ಪಂಚಾಯತಿ ಜವಾಬ್ದಾರಿ ನೀಡಿ ಇವರ ಭ್ರಷ್ಟಾಚಾರ ಹಾಗೂ ಅಕ್ರಮ ಸಂಪಾದನೆಗೆ ಕಡಿವಾಣ ಹಾಕಬೇಕು.ಸರ್ಕಾರಿ ಜಾಗಗಳನ್ನು ಹಣಕ್ಕಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಡುವುದು ಸರ್ಕಾರಿ ಹಣ ದುರುಪಯೋಗ ಹಾಗೂ ಕಾಮಗಾರಿ ಮಾಡದೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಳ್ಳಬಿಲ್ ಮಾಡುವುದು ಇವರಿಗೆ ಕರಗತವಾಗಿದೆ .ಈ ಹಿಂದೆ ಕೂಡ ಯಡಿಯಾಲ ಗ್ರಾಮ ಪಂಚಾಯತಿಯಲ್ಲಿ ಇವರ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ಸುದ್ದಿ ಮಾಡಲಾಗಿತ್ತು ” ವರದಿ: ಮೋಹನ್
ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಪ್ರದೇಶದಲ್ಲಿ ಮಾಚ್ 15ರ ರಾತ್ರಿ ಅಕ್ರಮ ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ ಭಟ್ಕಳ…
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೇಪುರ ಗ್ರಾಮದಲ್ಲಿ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ಭೋಜನ ಸೇವಿಸಿದ 30 ವಿದ್ಯಾರ್ಥಿಗಳು ಫುಡ್…
ರಷ್ಯಾದ ಸರ್ಕಸ್ ಆನೆಯೊಂದು ತನ್ನ 25 ವರ್ಷಗಳ ಸಹಚರನ ಅಗಲಿಕೆಗೆ ಮರುಗಿದ ಭಾವನಾತ್ಮಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮ್ಯಾಗ್ಡಾ…
ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು…
ಪಾಕಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ಭಾನುವಾರ ಭೀಕರ ದಾಳಿ ನಡೆದಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ…
ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ಉನ್ನತ ನಾಯಕ ಅಬು ಖದಿಜಾ ವಧೆಯಾಗಿರುವುದು ದೃಢಪಟ್ಟಿದೆ. ಅಮೆರಿಕಾ…