ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿರುವಂತೆ ನಟಿಸಿ ಹಣ ಪಿಕಿರುವ ಸಂಬಂಧ ಐದು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸದಾಶಿವನಗರ ಪಿಎಸ್ಐ ಮೋಹನ್ ಬಸವರಾಜ್, ಎಸ್ ಬಿ ಕಾನ್ಸ್ಟೇಬಲ್ ಶಿವಕುಮಾರ್, ಕ್ರೈಂ ಸ್ಟಾಫ್ ಪರಶುರಾಮ್ ಹಾಗೂ ನಾಗರಾಜ್ ಸೇರಿದಂತೆ ಒಟ್ಟು ಐವರನ್ನು ಹಿರಿಯ ಅಧಿಕಾರಿಗಳು ಅಮಾನತ್ತು ಮಾಡಿರುತ್ತಾರೆ.
ತಮ್ಮ ಠಾಣ ವ್ಯಾಪ್ತಿಗೆ ಸಂಬಂಧ ಪಡದಂತಹ ಸಹಕಾರ ನಗರದ ವ್ಯಕ್ತಿ ಯೋಗೇಶ್ ಬೆಟ್ಟಿಂಗ್ ಅಡ್ಡೆ ನಡೆಸುತ್ತಿರುವ ಬಗ್ಗೆ ಬೆದರಿಸಿ 3 ಲಕ್ಷ ಹಣವನ್ನು ಪಿಕಿರುತ್ತಾರೆ.
ಈ ವಿಚಾರದ ಬಗ್ಗೆ ಯೋಗೇಶ್ ಈಶಾನ್ಯ ಡಿಸಿಪಿಯಾದಂತಹ ಅನುಪ ಶೆಟ್ಟಿ ರವರಿಗೆ ಲಿಖಿತ ರೂಪದಲ್ಲಿ ದೂರನ್ನು ನೀಡಿದ್ದು. ಈ ದೂರಿನ ತನಿಕೆ ಯಲಹಂಕದ ಎಸಿಪಿ ರವರು ಮಾಡಿ ವರದಿಯನ್ನು ನೀಡಿರುತ್ತಾರೆ. ವರದಿಯಲ್ಲಿ ಸದಾಶಿವನಗರ ಪೊಲೀಸರು ಆತನ ಬಳಿ ಬೆದರಿಸಿ ಹಣ ಪಡೆದಿರುವುದು ಖಚಿತವಾಗಿರುತ್ತದೆ. ಇದರ ಹಿನ್ನೆಲೆ ಈ ಪ್ರಕರಣದಲ್ಲಿ ಭಾಗಿಯಾದಂತಹ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.