
ಬೆಂಗಳೂರು ಮೆಟ್ರೋ ಮತ್ತೆ ವಿಚಿತ್ರ ಕಾರಣದಿಂದಾಗಿ ಸುದ್ದಿಯ ಕೆಂದ್ರವಾಗಿದ್ದು, ಇದೀಗ ಮದಾವರ ನಿಲ್ದಾಣದಲ್ಲಿ ನಡೆದ ಅಸಭ್ಯ ಘಟನೆಯೊಂದರ ವಿಡಿಯೋ ಭಾರೀ ವೈರಲ್ ಆಗಿದೆ.
ವೀಡಿಯೋದಲ್ಲಿ ಯುವಕನೊಬ್ಬ, ಸಾರ್ವಜನಿಕ ಸ್ಥಳವೊಂದರಲ್ಲಿ ಯುವತಿಯ ಖಾಸಗಿ ಅಂಗಾಂಗಕ್ಕೆ ಕೈ ಹಾಕಿದ ದೃಶ್ಯ ಪತ್ತೆಯಾಗಿದ್ದು, ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋ ನಿಲ್ದಾಣದ ರೀತಿಯಲ್ಲಿ ನೂರಾರು ಜನರು ಮಾಡುತ್ತಿದ್ದ ಸಂದರ್ಭದಲ್ಲೇ ಈ ಜೋಡಿ ಅಸಭ್ಯವಾಗಿ ವರ್ತಿಸಿದ್ದು, ಸಾರ್ವಜನಿಕ ಸ್ಥಳದ ಗೌರವವನ್ನೇ ಕೆಡಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ನಗರದ ನೈತಿಕ ಮೌಲ್ಯಗಳ ಬಗ್ಗೆ ಭಾವನೆ ಹೊಂದಿರುವ ಹಲವರು, “ಬೆಂಗಳೂರು ಸಧ್ಯಕ್ಕೆ ಅನಾಗರಿಕತೆಯ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ. ಇದು ದೆಹಲಿ ಮಾದರಿಯ ಪರಿವರ್ತನೆಯಂತೆ ಭಾಸವಾಗುತ್ತಿದೆ” ಎಂದು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಮೆಟ್ರೋ ನಿಲ್ದಾಣಗಳು ದಿನನಿತ್ಯ ಸಾವಿರಾರು ಜನರ ನಡಿಗೆಗೆ ಸಾಕ್ಷಿಯಾಗುತ್ತವೆ. ಇಂತಹ ಸ್ಥಳಗಳಲ್ಲಿ ಶಿಷ್ಟಾಚಾರದ ಪಾಲನೆ ಅತ್ಯಾವಶ್ಯಕ. ಸಾರ್ವಜನಿಕ ಶಿಸ್ತನ್ನು ಮೀರಿ ನಡೆದ ಈ ಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಇದೀಗ ಉಕ್ಕಿ ಬರುತ್ತಿದೆ.