ಮೊದಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ದೇಶ ಮತ್ತೊಂದು ದೇಶದೊಂದಿಗೆ ವ್ಯವಹರಿಸಲು ಚಿನ್ನದ ನಾಣ್ಯಗಳನ್ನು ಬಳಸುತ್ತಿತ್ತು. ಆದರೆ ಈಗ ಚಿನ್ನದ ನಾಣ್ಯ ವಿರುವ ಸ್ಥಳದಲ್ಲಿ ಡಾಲರ್ ಬಂದಿದೆ. ಯಾವುದೇ ದೇಶವಾದರೂ ವ್ಯವಹರಿಸಲು ಹೆಚ್ಚಾಗಿ ಡಾಲರ್ ಬಳಸುತ್ತದೆ. ಯಾಕೆಂದರೆ ಅಮೆರಿಕಾದ ಆರ್ಥಿಕತೆ ಬಲಿಷ್ಠವಾಗಿರುವ ಕಾರಣ ಅಲ್ಲಿನ ಕರೆನ್ಸಿ ಆದಂತಹ ಡಾಲರ್ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಎಲ್ಲಾ ದೇಶಗಳು ಬೇರೆ ದೇಶಗಳೊಂದಿಗೆ ವ್ಯವಹರಿಸುವುದಕ್ಕೆಂದು ಡಾಲರನ್ನು ಹೆಚ್ಚಾಗಿ ಬಳಸುತ್ತಾರೆ. ಡಾಲರ್ ನ ಬಳಕೆ ಹೆಚ್ಚಾದಷ್ಟೂ ಅದರ ಮೌಲ್ಯವು ಸಹ ಹೆಚ್ಚಾಗುತ್ತದೆ. ಇದೇ ಕಾರಣದಿಂದಾಗಿ ವರ್ಷ ಕಳೆದಂತೆಲ್ಲಾ ಡಾಲರ್ ನ ಮೌಲ್ಯವು ಹೆಚ್ಚಾಗುತ್ತಿರುವುದು. ಸದಾ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ ಡಾಲರ್ ಕರೋನಾ ದಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಕೊರೋನಾದಿಂದಾಗಿ ಹಲವು ದೇಶದ ಮಾರುಕಟ್ಟೆಗಳು ನಷ್ಟವನ್ನು ಅನುಭವಿಸಿದವು ಇದರಲ್ಲಿ ಅಮೇರಿಕಾ ಹೊರತಲ್ಲ. ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅಮೇರಿಕಾದಲ್ಲಿ ಬೆಲೆ ಏರಿಕೆ ಹೆಚ್ಚಾದ ಕಾರಣ ಹಣದುಬ್ಬರ ಹೆಚ್ಚಾಗುತ್ತದೆ ಇದನ್ನು ತಡೆಯಲು ಅಮೆರಿಕಾದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ನಲ್ಲಿ ಹೂಡಿಕೆ ಮಾಡಿದಂತಹ ಹಲವು ದೇಶಗಳು ಹಣವನ್ನು ಹಿಂಪಡೆಯಲು ಮುಂದಾಗುತ್ತವೆ. ಹೀಗೆ ಮಾಡಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಡಾಲರ್ ನ ಬಳಕೆ ಹೆಚ್ಚಾಗಿ ಡಾಲರ್ ನ ಬೆಲೆಯು ಹೆಚ್ಚಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಹೆಚ್ಚು ಬಳಕೆ ಆದಷ್ಟು ಉಳಿದೆಲ್ಲ ದೇಶದ ಕರೆನ್ಸಿ ಬೆಲೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಲ್ಲಿ ಭಾರತದ ರೂಪಾಯಿ ಹೊರತಲ್ಲ. ಇಂದು ಒಂದು ಡಾಲರಿಗೆ ರೂಪಾಯಿಯ ಮೌಲ್ಯ 79.83 ಇದ್ದು ಕೆಲವೇ ದಿನಗಳಲ್ಲಿ ರೂಪಾಯಿ 80 ದಾಟುವ ಸಾಧ್ಯತೆ ಇದೆ. ಅಮೇರಿಕಾದ ಎದುರು ಅಂದರೆ ಡಾಲರ್ ಮೌಲ್ಯದ ಮುಂದೆ ರೂಪಾಯಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಭಾರತವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬಳಕೆಯನ್ನು ಕಡಿಮೆ ಮಾಡಬೇಕು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಗಣನೆ ಆಗದಂತಹ ರೂಪಾಯಿಯ ಮುಖಾಂತರ ನೇರವಾಗಿ ಬೇರೆ ದೇಶದೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ವ್ಯವಹರಿಸಲು ಬೇರೆ ದೇಶಗಳಿಗೆ ಭಾರತ ನೇರವಾಗಿ ರೂಪಾಯಿಯನ್ನು ಕೊಟ್ಟರೆ ಅವರುಗಳು ಸಹ ಒಪ್ಪುವುದಿಲ್ಲ ಅದಕ್ಕಾಗಿಯೇ ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಉಪಾಯವನ್ನು ಮಾಡಿದೆ. ಇದರಿಂದ ಭಾರತ ಡಾಲರ್ ಇಲ್ಲದೆ ರೂಪಾಯಿಯ ಮುಖಾಂತರವೇ ವ್ಯವಹರಿಸಬಹುದು.
ಡಾಲರ್ ಇಲ್ಲದೆ ವ್ಯವಹಾರ ನಡೆಸಲು ಭಾರತ ಮಾಡಿರುವ ಮಾಸ್ಟರ್ ಪ್ಲಾನ್ ಏನು?
ಡಾಲರ್ ನ ಮುಂದೆ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳದಿರಲಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡಿರುವ ಉಪಾಯ ಅಥವಾ ಯೋಜನೆ ಏನೆಂದರೆ ರೂಪಾಯಿ ಓಸ್ತ್ರೋ ಖಾತೆ. ರೂಪಾಯಿ ವೋಸ್ತ್ರೋ ಕತೆಯೆಂದರೆ ತಾವುಗಳು ಬಳಸುವಂತಹ ಬ್ಯಾಂಕಿನ ಖಾತೆ ಇದ್ದಂತೆ ಆದರೆ ಇದು ಮನಿ ಎಕ್ಸ್ಚೇಂಜ್ ರೀತಿಯಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಇಂತಹ ಖಾತೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆರೆಯುತಿದೆ. ಇದರಿಂದ ಭಾರತಕ್ಕಾಗಿ ಅನುಕೂಲವೇನೆಂದರೆ ಭಾರತ ಯಾವುದೇ ದೇಶದೊಂದಿಗೆ ವ್ಯವಹರಿಸಬೇಕಾದರೆ ರೂಪಾಯಿಯ ಮುಖಾಂತರವೇ ವ್ಯವಹರಿಸಬಹುದು. ಮೊದಲೇ ಹೇಳಿದ ಹಾಗೆ ರೂಪಾಯಿ ವೋಸ್ತ್ರೋ ಖಾತೆಯು ಮನಿ ಎಕ್ಸ್ಚೇಂಜ್ ನ ರೀತಿಯಲ್ಲೂ ವರ್ತಿಸುವ ಕಾರಣ. ನಾವು ರೂಪಾಯಿಯಲ್ಲಿ ಪಾವತಿಸಿದರು ಸಹ ಅದು ಸ್ವೀಕರಿಸುವವರಿಗೆ ಅವರದೇ ಆದಂತಹ ಕರೆನ್ಸಿಯಲ್ಲಿ ಹೋಗುತ್ತದೆ. ಇದರಿಂದ ನಾವು ಡಾಲರ್ ನ ಬಳಕೆ ಕಡಿಮೆ ಮಾಡಬಹುದು. ರೂಪಾಯನ್ನು ನೀಡಿ ಡಾಲರ್ ಕೊಂಡುಕೊಂಡು ನಮ್ಮ ವಿದೇಶಿ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಡಾಲರ್ ಮುಂದೆ ರೂಪಾಯಿ ಕುಸಿತ ಕಾಣುವುದನ್ನು ಕಡಿಮೆ ಮಾಡಬಹುದು. ಇದು ಭಾರತಕ್ಕೆ ಮಾತ್ರವೇ ಅಲ್ಲದೆ ಎಲ್ಲಾ ದೇಶಗಳಿಗೂ ಉಪಯೋಗವಾಗುತ್ತದೆ. ಡಾಲರ್ ನ ಮೇಲೆ ಅವಲಂಬಿತವಾಗಿರುವಂತಹ ಎಲ್ಲಾ ದೇಶಗಳು ತಮ್ಮದೇ ಆದಂತಹ ಕರೆನ್ಸಿಯನ್ನು ಬಳಸಿ ವ್ಯವಹರಿಸಬಹುದು. ಇದೊಂದು ಮಾತ್ರವೇ ಅಲ್ಲ. ಭಾರತ ಯಾವುದೇ ದೇಶದೊಂದಿಗೆ ವ್ಯವಹರಿಸಿದರು ಡಾಲರ್ ನ ಮುಖಾಂತರವೇ ವ್ಯವಹರಿಸುತ್ತಿದ್ದ ಕಾರಣ ಪ್ರತಿಯೊಂದು ವ್ಯವಹಾರವೂ ಅಮೇರಿಕಾಗೆ ತಿಳಿಯುತ್ತಿತ್ತು. ಭಾರತ ಮಾತ್ರವಲ್ಲದೆ ಡಾಲರ್ನಲ್ಲಿ ವ್ಯವಹರಿಸುತ್ತಿದ್ದ ಎಲ್ಲಾ ದೇಶದ ವ್ಯವಹಾರವು ಅಮೆರಿಕಾಗೆ ತಿಳೆಯುತ್ತಿತ್ತು. ರೂಪಾಯಿ ಹೋಸ್ತ್ರ ಖಾತೆಯನ್ನು ಇನ್ನು ಮುಂದೆ ಬಳಸುವುದರಿಂದ ಇದೆಲ್ಲವನ್ನೂ ತಪ್ಪಿಸಬಹುದು. ಒಟ್ಟಿನಲ್ಲಿ ಈ ಯೋಜನೆ ಎಲ್ಲಾ ದೇಶಗಳು ಖುಷಿ ಪಡುವಂತಹ ವಿಚಾರ. ಆದರೆ ಭಾರತದ ಈ ನಡೆಗೆ ಅಮೆರಿಕ ದಂಗಾಗಿದೆ ಎಂದರೆ ತಪ್ಪಾಗಲಾರದು.