ಇತ್ತೀಚಿನ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಕೇಶ್ವಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭುವನೇಶ್ವರಿ ಜ್ಯೂವೆಲರಿ ಶಾಪ್ ನಲ್ಲಿ ಅಂದಾಜು ಒಂದು ಕೋಟಿಗಿಂತ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣ ಕಳ್ಳತನವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೇರೆ ರಾಜ್ಯಗಳಲ್ಲಿಯೂ ಹೀಗೆ ದರೋಡೆ ಮಾಡುತ್ತಿದ್ದ ದರೋಡೆಕೋರನಾದ ಹೈದರಾಬಾದ್ ನಿವಾಸಿ ಫರ್ಹಾನ್ ಶೇಖ್ ಎಂಬ ವ್ಯಕ್ತಿಯನ್ನು ಕೇಶ್ವಾಪೂರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು
ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ಪ್ರಕರಣದ ಅಂತರ್ಜಾ ಆರೋಪಿಯನ್ನು ಬಂಧಿಸಿರುವಂತಹ ಪೊಲೀಸರು ಉಳಿದಂತೆ ಇತರೆ ಆರೋಪಿಗಳನ್ನು ಬಂಧನ ಮಾಡಲು ಈ ವ್ಯಕ್ತಿಯನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತಾರಿಹಾಳ ಹಾಳ ಬ್ರಿಜ್ ಬಳಿ ಹೋಗುತ್ತಿದ್ದಂತೆ ಫರ್ಹಾನ್ ಶೇಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದು ಕೂಡಲೇ ಕೇಶ್ವಾಪೂರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಕವಿತಾ ಮಾಡಗ್ಯಾಳ ಎರಡು ಸುತ್ತು ಗುಂಡು ಹಾರಿಸಿ ಫರ್ಹಾನ್ ಶೇಕ್ ನ ಕಾಲಿಗೆ ಶೂಟ್ ಔಟ್ ಮಾಡಿದ್ದಾರೆ.
ಕವಿತಾ ಶೂಟ್ ಔಟ್ ಮಾಡಿದ ಗುಂಡು ದರೋಡೆಕೋರನ ಕಾಲಿಗೆ ಬಿದ್ದಿದ್ದು ಕೂಡಲೇ ಈತನನ್ನು ಬಂಧಿಸಿದ್ದಾರೆ, ಈ ಶೂಟೌಟ್ ಪ್ರಕರಣ ಹುಬ್ಬಳ್ಳಿಯ ಗಾಮನಗಟ್ಟಿ ಹೋರವಲಯದಲ್ಲಿ ನಡೆದಿದೆ.
ಇಲ್ಲಿ ಬಂದಿತನಾದ ದರೋಡೆಕೋರ ಫರ್ಹಾನ್ ಶೇಕ್ ಹೈದರಾಬಾದ್ ಮೂಲದವನಾಗಿದ್ದು ವಿವಿಧ ರಾಜ್ಯದ ಪೊಲೀಸರಿಗೆ ಬೇಕಾಗಿರುವ ಅಂತರ್ ರಾಜ್ಯ ಕುಖ್ಯಾತ ದರೋಡೆಕೋರ ಇವನು ಎಂಬ ಸಂಶಯ ವ್ಯಕ್ತವಾಗಿದೆ. ಈ ಕಾರ್ಯಚರಣೆಯಲ್ಲಿ ಕೇಶ್ವಾಪೂರ್ ಪೊಲೀಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ಕವಿತಾ ಹಾಗೂ ಪೋಲಿಸ್ ಪೇದೆಗಳಾದ ಮಹೇಶ್ ಮತ್ತು ಸುಜಾತ ಎಂಬ ಮೂವರಿಗೆ ಗಾಯಗಳಾಗಿದ್ದು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ವರದಿ: ಶಿವು ಹುಬ್ಬಳ್ಳಿ