ಯುವಜನೋತ್ಸವ ನಿಮಿತ್ತ ಕಳೆದ 12/01/2023 ರಂದು ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ಛೋಟಾ ಮುಂಬೈ ( ಹುಬ್ಬಳ್ಳಿ ) ಗೆ ಬರುತ್ತಿದ್ದರು
ಮೋದಿ ಕಾರ್ಯಕ್ರಮಕ್ಕೆ ಸಂಚರಿಸುವ ಬೀದಿಗಳಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರೇಟ್ ಹಾಗೂ ಧಾರವಾಡ ಜಿಲ್ಲಾ ಅಕ್ಕ ಪಕ್ಕದ ಜಿಲ್ಲೆಯ ಪೋಲಿಸ್ ಅಧಿಕಾರಿಗಳಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಇನ್ಸಪೆಕ್ಟರ್ ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ದ್ವಿಚಕ್ರ ವಾಹನ ಚಾಲಕನಿಗೇ ಕಪಾಳ ಮೋಕ್ಷ ಮಾಡಿದ ಘಟನೆಯೂ ನಡೆದಿದೆ.
ಕಳೆದ 12/01/203 ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಮುಂಭಾಗ ಸ್ಥಳೀಯ ಗೋಕುಲ್ ಗ್ರಾಮದ ನಿವಾಸಿ ಒಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮಗುವನ್ನು ಶಾಲೆಯಿಂದ ಮನೆಗೇ ಕರೆದುಕೊಂಡು ಹೋಗುತ್ತಿರುವಾಗ ಇನ್ಸಪೆಕ್ಟರ್ ಶ್ರೀ ಎಸ್ ಎಸ್ ಕೌಜಲಗಿ ಸಾಹೇಬರು ದ್ವಿಚಕ್ರ ವಾಹನ ಸವಾರರನ್ನು ತಡೆದು ಅವರಿಗೇ ಬೈದು ಸಾರ್ವಜನಿಕ ಸ್ಥಳದಲ್ಲಿ ಬೇರೆ ಅಧಿಕಾರಿಗಳ ಎದುರೇ ಕಪಾಳ ಮೋಕ್ಷ ಮಾಡಿದ ಘಟನೆಯೂ ನಡೆದಿದೆ. ಆದರೂ ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಡೆಗಟ್ಟುತ್ತಾರಾ ಕಾದು ನೋಡಬೇಕಾಗಿದೆ.
ವರದಿ : ಶಿವು ಹುಬ್ಬಳ್ಳಿ .