ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ ಅಂಡ್ ಟ್ರೂಮಾ ಸೆಂಟರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.
32 ವರ್ಷದ ವ್ಯಕ್ತಿಯೊಬ್ಬರು ಡೆಂಘ್ಯೂನಿಂದ ಬಳಲುತ್ತಿದ್ದರು. ಅವರಿಗೆ ರಕ್ತದ ಪ್ಲೆಟೆಟ್ಸ್ ನೀಡಬೇಕಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ಪ್ಲಾಸ್ಮಾ ಎಂದು ಬರೆಯಲಾಗಿದ್ದ ಡ್ರಿಪ್ಸ್ ಅನ್ನು ನೀಡಿದ್ದು, ಅದರಲ್ಲಿ ಸಕ್ಕರೆ ಹಾಕಿದ ಮ್ಯೂಸಂಬಿ ಜ್ಯೂಸ್ ಇತ್ತು.
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಪರಿಶೀಲಿಸಿದಾಗ ರೋಗಿಗೆ ಮ್ಯೂಸಂಬಿ ಜ್ಯೂಸ್ ಡ್ರಿಪ್ ಹಾಕಿದ್ದು ತಿಳಿದು ಬಂದಿದ್ದು, ಕೂಡಲೇ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು. ಸರಕಾರ ಕೂಡಲೇ ಆಸ್ಪತ್ರೆಯನ್ನು ಸೀಜ್ ಮಾಡಲು ಆದೇಶಿಸಿದೆ.