ಬೆಳಗಾವಿ: ಜಿಲ್ಲೆಯ ಸಾವಗಾಂವ ಗ್ರಾಮದಲ್ಲಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಘಟನೆಯು ಬೆಳಕಿಗೆ ಬಂದಿದೆ. ಈ ಮೂಲಕ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಗೊಂದಲವನ್ನು ಉಂಟುಮಾಡಿದ್ದಾರೆ.
62 ವರ್ಷದ ಗಣಪತಿ ಖಾಚು ಕಾಕತಕರ ಅವರ ಹೆಸರಿನಲ್ಲಿ ನೀಡಲಾಗಿದ್ದ ಮರಣ ಪ್ರಮಾಣ ಪತ್ರವನ್ನು ಅವರ ಸಂಬಂಧಿಕರು ಗಮನಿಸಿದಾಗ ಅದು ತೊಂದರೆ ಸೃಷ್ಟಿಯಾಯಿತು. 1976ರ ಫೆಬ್ರವರಿ 2ರಂದು ಗಣಪತಿಯ ಅಜ್ಜ ಮಸನು ಶಟ್ಟು ಕಾಕತಕರ ನಿಧನರಾಗಿದ್ದರು. ಆಜ್ಜನ ಮರಣ ಪ್ರಮಾಣ ಪತ್ರವನ್ನು ಪಡೆಯಲು ಆಜ್ಜನ 8 ಮೊಮ್ಮಕ್ಕಳು ತಹಶೀಲ್ದಾರ್ ಕಚೇರಿಗೆ ಹೋದಾಗ, ಅಜ್ಜನ ಮರಣ ಪತ್ರ ನೀಡುವ ಬದಲು ಮೊಮ್ಮಗನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ್ದರಿಂದ
ಈ ತಪ್ಪಿನಿಂದಾಗಿ ಗಣಪತಿ ಅವರ ಆಧಾರ್ ಕಾರ್ಡ್ ಲಾಕ್‌ ಆಗಿದ್ದು, ಇದರಿಂದ ಅವರ ವೃದ್ಧಾಪ್ಯ ವೇತನ ಮತ್ತು ವೋಟಿಂಗ್ ಕಾರ್ಡ್‌ ಕೂಡ ರದ್ದಾಗಿವೆ. ಈ ಕಾರಣದಿಂದಾಗಿ ಗಣಪತಿ ಅವರು ಅಧಿಕಾರಿಗಳ ವಿರುದ್ಧ ಕ್ರಮವಿಧಾನ ತೆಗೆದುಕೊಳ್ಳಲು ಆಗ್ರಹಿಸಿ, ದಾಖಲೆಗಳಲ್ಲಿ ತಿದ್ದುಪಡಿ ಮಾಡಬೇಕೆಂದು ಜಿಲ್ಲಾಧಿಕಾರಿ ಮುಂದೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!