ಬೆಳಗಾವಿ: ಜಿಲ್ಲೆಯ ಸಾವಗಾಂವ ಗ್ರಾಮದಲ್ಲಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಘಟನೆಯು ಬೆಳಕಿಗೆ ಬಂದಿದೆ. ಈ ಮೂಲಕ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಗೊಂದಲವನ್ನು ಉಂಟುಮಾಡಿದ್ದಾರೆ.
62 ವರ್ಷದ ಗಣಪತಿ ಖಾಚು ಕಾಕತಕರ ಅವರ ಹೆಸರಿನಲ್ಲಿ ನೀಡಲಾಗಿದ್ದ ಮರಣ ಪ್ರಮಾಣ ಪತ್ರವನ್ನು ಅವರ ಸಂಬಂಧಿಕರು ಗಮನಿಸಿದಾಗ ಅದು ತೊಂದರೆ ಸೃಷ್ಟಿಯಾಯಿತು. 1976ರ ಫೆಬ್ರವರಿ 2ರಂದು ಗಣಪತಿಯ ಅಜ್ಜ ಮಸನು ಶಟ್ಟು ಕಾಕತಕರ ನಿಧನರಾಗಿದ್ದರು. ಆಜ್ಜನ ಮರಣ ಪ್ರಮಾಣ ಪತ್ರವನ್ನು ಪಡೆಯಲು ಆಜ್ಜನ 8 ಮೊಮ್ಮಕ್ಕಳು ತಹಶೀಲ್ದಾರ್ ಕಚೇರಿಗೆ ಹೋದಾಗ, ಅಜ್ಜನ ಮರಣ ಪತ್ರ ನೀಡುವ ಬದಲು ಮೊಮ್ಮಗನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ್ದರಿಂದ
ಈ ತಪ್ಪಿನಿಂದಾಗಿ ಗಣಪತಿ ಅವರ ಆಧಾರ್ ಕಾರ್ಡ್ ಲಾಕ್ ಆಗಿದ್ದು, ಇದರಿಂದ ಅವರ ವೃದ್ಧಾಪ್ಯ ವೇತನ ಮತ್ತು ವೋಟಿಂಗ್ ಕಾರ್ಡ್ ಕೂಡ ರದ್ದಾಗಿವೆ. ಈ ಕಾರಣದಿಂದಾಗಿ ಗಣಪತಿ ಅವರು ಅಧಿಕಾರಿಗಳ ವಿರುದ್ಧ ಕ್ರಮವಿಧಾನ ತೆಗೆದುಕೊಳ್ಳಲು ಆಗ್ರಹಿಸಿ, ದಾಖಲೆಗಳಲ್ಲಿ ತಿದ್ದುಪಡಿ ಮಾಡಬೇಕೆಂದು ಜಿಲ್ಲಾಧಿಕಾರಿ ಮುಂದೆ ಮನವಿ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ವಾಸವಿದ್ದ ಮಹಿಳೆಯೊಬ್ಬಳು ಅತ್ಯಾಚಾರ ಘಟನೆ ನಡೆದಿದೆ ಎಂಬ ನಾಟಕ ರೂಪಿಸಿ ಪೊಲೀಸರಿಗೆ ತೀವ್ರವಾಗಿ ತಲೆನೋವು…
ಬೆಂಗಳೂರು: ನಗರದಲ್ಲೊಂದು ಅಶ್ಲೀಲ ವರ್ತನೆ ಗಂಭೀರ ಹಲ್ಲೆ ಪ್ರಕರಣಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿಯಲ್ಲಿರುವ ಶಿವಾಜಿನಗರದಲ್ಲಿ ಏಪ್ರಿಲ್ 13ರಂದು ಈ ಘಟನೆ…
ಮಾಲೂರು: ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಸಮೀಪ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 700 ಗ್ರಾಂ ಗಾಂಜಾವನ್ನು ಮಾಲೂರು ಅಬಕಾರಿ ಅಧಿಕಾರಿಗಳು ಬುಧವಾರ…
ಗದಗ ಜಿಲ್ಲೆ ಮುಂಡರಗಿಯಲ್ಲಿ ಬಸ್ ಹತ್ತುವ ಕುರಿತಂತೆ ನಡೆದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿ, ಮೂವರು ಯುವಕರು ಬಸ್ ಕಂಡಕ್ಟರ್…
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ ಅಮಾನುಷ ಹಲ್ಲೆ ಪ್ರಕರಣ ಮತ್ತೊಮ್ಮೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಪ್ರಮಾಣಿತ…
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ನ್ಯೂ ಗಾಂಧಿ ನಗರದಲ್ಲಿ ಬುಧವಾರ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮಣ್ಣುಕೆಳಗೆ…