ಬೇತಮಂಗಲದ ಸಮೀಪ, ಬೆಂಗಳೂರಿನಿಂದ ಚೆನ್ನೈ ಕಾರಿಡಾರ್ ರಸ್ತೆಯ ಸುಂದರಪಾಳ್ಯ ಗ್ರಾಮದ ಟೋಲ್ ಪಾವತಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸ್ಥಾಪಿಸಿರುವ ನಾಮಫಲಕದಲ್ಲಿ ಬೆಂಗಳೂರಿನ ಹೆಸರನ್ನು ‘ಬಂಗಳೂರು’ ಎಂದು ತಪ್ಪಾಗಿ ನಮೂದಿಸಲಾಗಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡದ ಬಗ್ಗೆ ನಿರ್ಲಕ್ಷ್ಯಕ್ಕೆ ಆಕ್ರೋಶ
ರಾಜ್ಯದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಕನ್ನಡ ಉಳಿಸುವ ಸವಾಲಿನ ಮಧ್ಯೆ, ಗುತ್ತಿಗೆದಾರರು ಬೆಂಗಳೂರು ಹೆಸರನ್ನು ತಪ್ಪಾಗಿ ನಮೂದಿಸಿರುವುದು ಕನ್ನಡ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ.
ಸ್ಥಳೀಯರ ಆಕ್ರೋಶ
“ಸುನ್ದರಪಾಳ್ಯ ಗ್ರಾಮದ ಮೂಲಕ ಬೇತಮಂಗಲ ಮತ್ತು ಇತರ ಗ್ರಾಮಗಳಿಗೆ ಕಾರಿಡಾರ್ ರಸ್ತೆಯಿಂದ ಪ್ರವೇಶ ಸಾಧ್ಯ. ಇಂತಹ ಪ್ರಮುಖ ಸ್ಥಳದಲ್ಲಿ ನಮ್ಮ ರಾಜ್ಯದ ಹೆಮ್ಮೆಯ ನಗರಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಬರೆದಿದ್ದಾರೆ. ಇದು ಖಂಡನೀಯ. ಜೊತೆಗೆ ಸುಂದರಪಾಳ್ಯ ಗ್ರಾಮ ಹೆಸರನ್ನೂ ನಾಮಫಲಕದಲ್ಲಿ ಬಿಡಲಾಗಿದೆ,” ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಮ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಾಪಾಡಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

error: Content is protected !!