ಬೇತಮಂಗಲದ ಸಮೀಪ, ಬೆಂಗಳೂರಿನಿಂದ ಚೆನ್ನೈ ಕಾರಿಡಾರ್ ರಸ್ತೆಯ ಸುಂದರಪಾಳ್ಯ ಗ್ರಾಮದ ಟೋಲ್ ಪಾವತಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸ್ಥಾಪಿಸಿರುವ ನಾಮಫಲಕದಲ್ಲಿ ಬೆಂಗಳೂರಿನ ಹೆಸರನ್ನು ‘ಬಂಗಳೂರು’ ಎಂದು ತಪ್ಪಾಗಿ ನಮೂದಿಸಲಾಗಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡದ ಬಗ್ಗೆ ನಿರ್ಲಕ್ಷ್ಯಕ್ಕೆ ಆಕ್ರೋಶ
ರಾಜ್ಯದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಕನ್ನಡ ಉಳಿಸುವ ಸವಾಲಿನ ಮಧ್ಯೆ, ಗುತ್ತಿಗೆದಾರರು ಬೆಂಗಳೂರು ಹೆಸರನ್ನು ತಪ್ಪಾಗಿ ನಮೂದಿಸಿರುವುದು ಕನ್ನಡ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ.
ಸ್ಥಳೀಯರ ಆಕ್ರೋಶ
“ಸುನ್ದರಪಾಳ್ಯ ಗ್ರಾಮದ ಮೂಲಕ ಬೇತಮಂಗಲ ಮತ್ತು ಇತರ ಗ್ರಾಮಗಳಿಗೆ ಕಾರಿಡಾರ್ ರಸ್ತೆಯಿಂದ ಪ್ರವೇಶ ಸಾಧ್ಯ. ಇಂತಹ ಪ್ರಮುಖ ಸ್ಥಳದಲ್ಲಿ ನಮ್ಮ ರಾಜ್ಯದ ಹೆಮ್ಮೆಯ ನಗರಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಬರೆದಿದ್ದಾರೆ. ಇದು ಖಂಡನೀಯ. ಜೊತೆಗೆ ಸುಂದರಪಾಳ್ಯ ಗ್ರಾಮ ಹೆಸರನ್ನೂ ನಾಮಫಲಕದಲ್ಲಿ ಬಿಡಲಾಗಿದೆ,” ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಮ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಾಪಾಡಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ₹87 ಸಾವಿರ ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿದ್ದಾರೆ.…
ತುರುವೇಕೆರೆ ತಾಲ್ಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಲಕ್ಷ್ಮೀ (30), ಎರಡು ಗಂಡು…
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ₹20 ಲಕ್ಷ ವಂಚನೆಯ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಿವಾಸಿ ಶ್ರೀನಿವಾಸ (54)…
ರಾಯಚೂರು: ರಾಜ್ಯದಲ್ಲಿ ರೋಡ್ ರಾಬರಿ ಮತ್ತು ಎಟಿಎಂ ರಾಬರಿ ಕೃತ್ಯಗಳು ನಿಯಮವಾಯಿತೇ ಎಂಬಂತೆಯೇ ನಡೆಯುತ್ತಿವೆ. ಸರ್ಕಾರ ಮತ್ತು ಪೊಲೀಸರು ಯಾವುದೇ…
ಬಂಕಾ ಜಿಲ್ಲೆಯ ಬರಾಹತ್ ಬ್ಲಾಕ್‌ನಲ್ಲಿರುವ ಮದರಸಾ ವಿದ್ಯಾರ್ಥಿಗಳನ್ನು "ಜೈ ಶ್ರೀ ರಾಮ್" ಹೇಳಲು ಬಲವಂತಪಡಿಸುವ ಗೊಂದಲಕಾರಿ ವೀಡಿಯೋ ಈಗ ಸಿಕ್ಕಾಪಟ್ಟೆ…
ಚಿಕ್ಕೋಡಿ ಪಟ್ಟಣದಲ್ಲಿ ಇಂದು ವಿದ್ಯಾಂಗನಾ ವಿರುದ್ಧ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಚರ್ಚೆಗೆ ವಿಷಯವಾಗಿದೆ. ಆರ್.ಡಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು…