ಮುಂಡಗೋಡ: ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಮುಂಡಗೋಡ ಪೊಲೀಸರು ಬೈಕ್ ಸಮೇತ ಬಂಧಿಸಿದ್ದಾರೆ.ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಅನಿಲ್ ಶಿವಪ್ಪ ಬಂಡಿವಡ್ಡರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಜೂನ್ 6 ರಂದು ತಾಲೂಕಿನ ಕಾತುರ ಗ್ರಾಮದ ಸಿರಾಜ್ ಭಾಷಾ ಬೊಮ್ಮನಹಳ್ಳಿ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ರೊ ಬೈಕ್ ಕಳ್ಳತನವಾಗಿತ್ತು.ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣವನ್ನು ಕೈಗೆತ್ತಿಕೊಂಡ ಮುಂಡಗೋಡ ಪೊಲೀಸರು ಬೈಕ್ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂದಿತರು ಪಿಯು ಮಹಾರಾಷ್ಟ್ರದ ಪುಣೆ, ಸೊಲ್ಹಾಪುರ ಹಾಗೂ ಕೊಲ್ಹಾಪುರ ಸೇರಿದಂತೆ ಹತ್ತಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆಯ ಸಿ.ಪಿ.ಐ ಸಿದ್ದಪ್ಪ ಸಿಮಾನಿ, ಪಿ.ಎಸ್.ಐ ಬಸವರಾಜ್ ಮಬನೂರ, ಕ್ರೈಂ ಪಿ.ಎಸ್.ಐ ಎನ್. ಡಿ ಜಕ್ಕಣ್ಣವರ್, ಎ.ಎಸ್.ಐ ಮಣಿಮಾಲನ್ ಮೇಸ್ತ್ರಿ, ಲೋಕೇಶ್ ಮೇಸ್ತ್, ಹಾಗೂ ಸಿಬ್ಬಂದಿಗಳಾದ ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ ವಿವೇಕ ಪಟಗಾರ, ಸಲೀಂ,ಸಹದೇವ, ಶರತ್ ದೇವಳಿ ಸೇರಿದಂತೆ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುನಾಥ ಹರಿಜನ