ಧಾರವಾಡ : ಪೇಡಾ ನಗರಿ ಧಾರವಾಡದಲ್ಲಿ ಹಾಡು ಹಗಲೆ ನಡುಬೀದಿಯಲ್ಲಿಯೇ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಆದರೆ ಇಂದೇ ಯುವತಿಯರು ಬೀದಿ ಬದಿಯಲ್ಲಿ ಹೊಡೆದಾಡಿಕೊಂಡ ಪ್ರಸಂಗವೊಂದು ನಡೆದಿದೆ.
ಹೌದು. ಧಾರವಾಡದ ಓಲ್ಡ್ ಡಿಎಸ್ಪಿ ಸರ್ಕಲ್ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಜೊತೆಯಾಗಿ ಬಂದಿದ್ದ ಯುವತಿಯರು, ಆರಂಭದಲ್ಲಿ ಕಾರಿನೊಳಗೆ ಕಾದಾಟ ನಡೆಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಹೊಡೆದಾಡಿಕೊಂಡಿದ್ದಾರೆ.
ಯುವತಿಯರು ಜುಟ್ಟು ಜುಟ್ಟು ಹಿಡಿದು ಹೊಡೆದಾಡಿಕೊಂಡ ವೀಡಿಯೋವನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಸತ್ಯಕ್ಕೆ ಇವರಿಬ್ಬರು ಯಾರು…? ಎಲ್ಲಿಯವರು ..? ಎಂಬುದು ತಿಳಿದುಬಂದಿಲ್ಲ.
ವರದಿ : ಚರಂತಯ್ಯ ಹಿರೇಮಠ.