ಆಲಮಟ್ಟಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಗು ಹುಟ್ಟಿದಾಗ ಅದರ ಆರೈಕೆಯಿಂದಲೇ ಮಗುವಿನ ಮುಂದಿನ ಆರೋಗ್ಯಕರ ಭವಿಷ್ಯ ನಿರ್ಮಾಣವಾಗುತ್ತದೆ, ಹೀಗಾಗಿ ಮಗುವಿಗೆ ತಾಯಿ ಹಾಲು ಕುಡಿಸುವುದು ಅತಿ ಅಗತ್ಯ ಎಂದು ಶಿವಮೊಗ್ಗದ ವೈದ್ಯೆ ಡಾ ಜ್ಯೋತಿಲಕ್ಷ್ಮಿ ಪಾಟೀಲ ಹೇಳಿದರು.

ಆಲಮಟ್ಟಿಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೆಬಿಜೆಎನ್ ಎಲ್ ಸಹಯೋಗದಲ್ಲಿ ಶುಕ್ರವಾರ 21/03/2025 ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟಿದ ಮಗುವಿನ ಆರೈಕೆ ಅತ್ಯಗತ್ಯ. ಕುಟುಂಬದ ಆರೋಗ್ಯ ರಕ್ಷಣೆಗೆ ಆರೋಗ್ಯಕರ ಆಹಾರ ಸೇವಿಸುವುದು ಅಗತ್ಯ, ಅದಕ್ಕಾಗಿ ನೈಸರ್ಗಿಕ ಆಹಾರ,  ಸಿರಿಧಾನ್ಯಗಳ ಬಳಕೆ, ಹಣ್ಣುಗಳಿಗೆ ಹೆಚ್ಚು ಒತ್ತು ನೀಡಿದರೆ ಇಡೀ ಕುಟುಂಬದ ಆರೋಗ್ಯವೂ ಸುಧಾರಣೆಯಾಗುತ್ತದೆ ಎಂದರು. ಅದಕ್ಕಾಗಿ ನೈಸರ್ಗಿಕ ವಸ್ತುಗಳ ಬಳಕೆ ಮಾಡುವ ಹಾಗೂ ನಾನಾ ಅಡುಗೆ ತಿಂಡಿಗಳನ್ನು ಪ್ರಸ್ತಾಪಿಸಿದ್ದು, ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದರು. ಮಹಿಳೆಯರಲ್ಲಿ ಕಬ್ಬಿಣಾಂಶ,  ಪ್ರೊಟಿನ್ ಹಾಗೂ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಣುತ್ತಿದೆ, ಇದರಿಂದ ಮೂಳೆ ಸವೆತ ರೋಗ, ರಕ್ತಹೀನತೆ ಕಾಯಿಲೆ ಹೆಚ್ಚುತ್ತಿದೆ ಎಂದರು.  ಮಹಿಳೆಯರ ಆರೋಗ್ಯದ ವಿಚಾರ ಹಾಗೂ ದಿನಚರಿಗೆ ಸಂಬಂಧಪಟ್ಟಂತೆ ಹಲವು ಸಲಹೆಗಳನ್ನು ಸಹ ಕಾರ್ಯಕ್ರಮದಲ್ಲಿ ಹೇಳಿರುತ್ತಾರೆ.

ಮುಖ್ಯ ಎಂಜಿನಿಯ‌ರ್ ಡಿ.ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರೇ,  ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಹನಾ ಬಸವರಾಜ, ಸುವರ್ಣಾ ಹಿರೇಗೌಡರ, ಪುಷ್ಪಾ ರಾಠೋಡ, ಉಷಾ ಗುಂಡ, ಮಹೇಶ್ವರಿ ಪಾಟೀಲ, ಡಾ.ರಾಜೇಶ್ವರಿ ಹದ್ದಿ, ಕೋಮಲ ನಾಯಕ್, ವಿಜಯಲಕ್ಷ್ಮಿ ರೆಡ್ಡಿ, ಬಸವರಾಜ ಬನ್ನೂರ, ವೈ. ಎಂ.ಪಾತ್ರೋಟ, ಶ್ರೀರಕ್ಷಾ, ಮಹಾಂತೇಶ ಒಡೆಯರ ಮತ್ತೀತರರು ಭಾಗಿಯಾಗಿದ್ದರು. ವರದಿ: ಸಂಗಪ್ಪ ಚಲವಾದಿ

Leave a Reply

Your email address will not be published. Required fields are marked *

error: Content is protected !!