ಆಲಮಟ್ಟಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಗು ಹುಟ್ಟಿದಾಗ ಅದರ ಆರೈಕೆಯಿಂದಲೇ ಮಗುವಿನ ಮುಂದಿನ ಆರೋಗ್ಯಕರ ಭವಿಷ್ಯ ನಿರ್ಮಾಣವಾಗುತ್ತದೆ, ಹೀಗಾಗಿ ಮಗುವಿಗೆ ತಾಯಿ ಹಾಲು ಕುಡಿಸುವುದು ಅತಿ ಅಗತ್ಯ ಎಂದು ಶಿವಮೊಗ್ಗದ ವೈದ್ಯೆ ಡಾ ಜ್ಯೋತಿಲಕ್ಷ್ಮಿ ಪಾಟೀಲ ಹೇಳಿದರು.
ಆಲಮಟ್ಟಿಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೆಬಿಜೆಎನ್ ಎಲ್ ಸಹಯೋಗದಲ್ಲಿ ಶುಕ್ರವಾರ 21/03/2025 ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟಿದ ಮಗುವಿನ ಆರೈಕೆ ಅತ್ಯಗತ್ಯ. ಕುಟುಂಬದ ಆರೋಗ್ಯ ರಕ್ಷಣೆಗೆ ಆರೋಗ್ಯಕರ ಆಹಾರ ಸೇವಿಸುವುದು ಅಗತ್ಯ, ಅದಕ್ಕಾಗಿ ನೈಸರ್ಗಿಕ ಆಹಾರ, ಸಿರಿಧಾನ್ಯಗಳ ಬಳಕೆ, ಹಣ್ಣುಗಳಿಗೆ ಹೆಚ್ಚು ಒತ್ತು ನೀಡಿದರೆ ಇಡೀ ಕುಟುಂಬದ ಆರೋಗ್ಯವೂ ಸುಧಾರಣೆಯಾಗುತ್ತದೆ ಎಂದರು. ಅದಕ್ಕಾಗಿ ನೈಸರ್ಗಿಕ ವಸ್ತುಗಳ ಬಳಕೆ ಮಾಡುವ ಹಾಗೂ ನಾನಾ ಅಡುಗೆ ತಿಂಡಿಗಳನ್ನು ಪ್ರಸ್ತಾಪಿಸಿದ್ದು, ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದರು. ಮಹಿಳೆಯರಲ್ಲಿ ಕಬ್ಬಿಣಾಂಶ, ಪ್ರೊಟಿನ್ ಹಾಗೂ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಣುತ್ತಿದೆ, ಇದರಿಂದ ಮೂಳೆ ಸವೆತ ರೋಗ, ರಕ್ತಹೀನತೆ ಕಾಯಿಲೆ ಹೆಚ್ಚುತ್ತಿದೆ ಎಂದರು. ಮಹಿಳೆಯರ ಆರೋಗ್ಯದ ವಿಚಾರ ಹಾಗೂ ದಿನಚರಿಗೆ ಸಂಬಂಧಪಟ್ಟಂತೆ ಹಲವು ಸಲಹೆಗಳನ್ನು ಸಹ ಕಾರ್ಯಕ್ರಮದಲ್ಲಿ ಹೇಳಿರುತ್ತಾರೆ.
ಮುಖ್ಯ ಎಂಜಿನಿಯರ್ ಡಿ.ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರೇ, ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಹನಾ ಬಸವರಾಜ, ಸುವರ್ಣಾ ಹಿರೇಗೌಡರ, ಪುಷ್ಪಾ ರಾಠೋಡ, ಉಷಾ ಗುಂಡ, ಮಹೇಶ್ವರಿ ಪಾಟೀಲ, ಡಾ.ರಾಜೇಶ್ವರಿ ಹದ್ದಿ, ಕೋಮಲ ನಾಯಕ್, ವಿಜಯಲಕ್ಷ್ಮಿ ರೆಡ್ಡಿ, ಬಸವರಾಜ ಬನ್ನೂರ, ವೈ. ಎಂ.ಪಾತ್ರೋಟ, ಶ್ರೀರಕ್ಷಾ, ಮಹಾಂತೇಶ ಒಡೆಯರ ಮತ್ತೀತರರು ಭಾಗಿಯಾಗಿದ್ದರು. ವರದಿ: ಸಂಗಪ್ಪ ಚಲವಾದಿ
ಹಾವೇರಿ: ಶುಶ್ರೂಷಕಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಇಮಾಮ್‌ಸಾಬ್ ಬೆಣ್ಣೆಗೇರಿಗೆ ಪೊಲೀಸ್ ಠಾಣೆಯ ಸೆಲ್‌ನಲ್ಲಿ ಅನಧಿಕೃತವಾಗಿ…
ಕೊಡಗು: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಳತೋಡು ಗ್ರಾಮದಲ್ಲಿ ರಕ್ತಸಿಕ್ತ ಘಟನೆ ನಡೆದಿದ್ದು, ಕಾಫಿ ತೋಟದ ಲೈನ್ ಮನೆಯಲ್ಲಿ ನಾಲ್ವರನ್ನು…
ಜಾಲೋರ್, ಮಾರ್ಚ್ 28: ಜಾಲೋರ್ ಜಿಲ್ಲೆಯ ಸರ್ವಾನಾ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಹನುಮಾನರಾಮ್ ಮಹಿಳೆಯೊಂದಿಗಿನ ಅಶ್ಲೀಲ ವಿಡಿಯೋ ವೈರಲ್ ಆದ…
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಬಹುಮಟ್ಟದ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಸೇರಿದಂತೆ 15…
ಉಡುಪಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಅಪಹರಣ ಸಂಬಂಧ ಗಂಭೀರ ಆರೋಪಗಳು ಎದುರಾಗಿದ್ದು, ಮೊಹಮ್ಮದ್ ಅಕ್ರಮ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಹೃತೆಯ ತಂದೆ…
ಆಂಧ್ರಪ್ರದೇಶದ ಪೂರ್ವ ಭಾಗದಲ್ಲಿ ಹಕ್ಕಿ ಜ್ವರ (H5N1) ಸೋಂಕಿನ ಏಕಾಏಕಿ ದೃಢೀಕರಣದಿಂದ ರಾಜ್ಯದ ಕೋಳಿ ಪಂಗಡಕ್ಕೆ ದೊಡ್ಡ ಹೊಡೆತವಾಗಿದೆ. ಭಾರತೀಯ…