ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳು ಇತ್ತೀಚಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.
ಮತ್ತೊಂದು ಭ್ರಷ್ಟಾಚಾರ: ಜನವರಿ-01-2025 ರಂದು ಅಬಕಾರಿ ಆಯುಕ್ತರು, 35 ಅಧಿಕಾರಿಗಳನ್ನು ಅಬಕಾರಿ ನಿರೀಕ್ಷಕರ ವೃಂದಕ್ಕೆ ಸ್ಥಾನಪನ್ನ ಪದೋನ್ನತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುತ್ತಾರೆ. ಈ ಆದೇಶ ಹೊರಡಿಸಿದ ಮರುದಿನವೇ ಅಬಕಾರಿ ಆಯುಕ್ತರಾದ ರವಿಶಂಕರ್ ರವರ ವರ್ಗಾವಣೆಯಾಗಿದೆ. ದಿಡೀರನೆ ಈ ರೀತಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದಕ್ಕೆಲ್ಲಾ ಕಾರಣ ಅಬಕಾರಿ ಮಂತ್ರಿಗಳಾದ ಬಿ.ಆರ್ ತಿಮ್ಮಾಪುರ ರವರು ಎಂಬ ಮಾತು ಇಲಾಖೆಯಲ್ಲೆಲ್ಲಾ ಓಡಾಡುತ್ತಿದೆ.
ಈ ಮಾತಿಗೆ ಪುಷ್ಟಿ ಕೊಡುವಂತೆ ಅಬಕಾರಿ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದ ದಿನವೇ ಅದನ್ನು ತಡೆ ಹಿಡಿಯುವಂತೆ ಮಂತ್ರಿಗಳು ಹೇಳಿರುವ ಮಾಹಿತಿ ಲಭ್ಯವಾಗಿದ್ದು ಇದು ಯಾವ ಉದ್ದೇಶಕ್ಕೆ ಎಂಬುದರ ಸ್ಪಷ್ಟ ಮಾಹಿತಿಯನ್ನು ಹೊರಹಾಕಿರುವುದಿಲ್ಲ. ಮೂಲಗಳ ಪ್ರಕಾರ ಪದೋನ್ನತಿ ನೀಡುವ ವಿಚಾರದಲ್ಲಿ ಹಣ ಪಡೆದು ಬಡ್ತಿ ನೀಡಬೇಕೆಂಬ ಉದ್ದೇಶದಲ್ಲಿ ಮಂತ್ರಿಗಳಿದ್ದು, ಅದೇ ಉದ್ದೇಶದಿಂದ ಅಬಕಾರಿ ಆಯುಕ್ತ ರವಿಶಂಕರ್ ರವರು ನೀಡಿರುವ ಆದೇಶವನ್ನು ತಡೆಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪದೋನ್ನತಿ ಪಡೆದಿರುವ ಅಧಿಕಾರಿಗಳು ಮತ್ತು ಮಂತ್ರಿಗಳ ಮಧ್ಯೆ ಶೆಟ್ಟಿ ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಹಣದ ವಿಚಾರದಲ್ಲಿ ಹಲವು ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿಯು ಸಹ ಲಭ್ಯವಾಗಿದೆ.
ಪದೋನ್ನತಿ ಪಡೆದಿರುವ ಅಧಿಕಾರಿಗಳ ಪಟ್ಟಿಯಲ್ಲಿರುವ ಕೆಲವರು ಅಬಕಾರಿ ಆಯುಕ್ತರು ತುಂಬಾ ಒಳ್ಳೆಯವರು ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ! ಇನ್ನೂ ಕೆಲವರು ಅವರು ಮಾಡಿರುವ ಕೆಲಸದಲ್ಲಿ ಹಣ ಮಾಡುವ ನಿಟ್ಟಿನಲ್ಲಿ ಮಂತ್ರಿಗಳು ಈಗ ಮಧ್ಯದಲ್ಲಿ ಬಂದಿದ್ದಾರೆ ಎಂಬ ಮಾತುಗಳನ್ನು ಸಹ ಆಡುತ್ತಿದ್ದಾರೆ.
ಇಲಾಖೆಯಲ್ಲಿ ಕೇಳಿಬರುತ್ತಿರುವ ಮಾತುಗಳಂತೆ ಅಬಕಾರಿ ಮಂತ್ರಿಗಳಾದ ತಿಮ್ಮಾಪುರ ರವರು ಪದೋನ್ನತಿ ವಿಚಾರದಲ್ಲಿ ಹಣ ಮಾಡಲು ಮುಂದಾಗಿದ್ದಾರಾ? ಇತ್ತೀಚಿಗೆ ವರ್ಗಾವಣೆಯ ವಿಚಾರಗಳಲ್ಲಿ ಲಕ್ಷಾಂತರ ರೂ ಹಣ ಪಡೆಯುತ್ತಿರುವ ಮಾಹಿತಿಗಳು ಹೊರಬಿದ್ದಿದ್ದು ಈಗ ಅಧಿಕಾರಿಗಳ ಪದೋನ್ನತಿ ವಿಚಾರದಲ್ಲೂ ಲಕ್ಷಾಂತರ ರೂ ಭ್ರಷ್ಟಾಚಾರ ನಡೆಯುತ್ತಿರುವ ಮಾಹಿತಿಗಳು ಲಭ್ಯವಾಗುತ್ತಿವೆ. ನಿಜಕ್ಕೂ ಇದು ಕಾಂಗ್ರೆಸ್ ಸರ್ಕಾರದ ಹಗಲು ದರೋಡೆಯೇ? ಪದೋನ್ನತಿ ಪಡೆದಿರುವ ಪಟ್ಟಿಯಲ್ಲಿರುವ ಬಹುತೇಕ ಅಧಿಕಾರಿಗಳು ಅಲ್ಪಸಂಖ್ಯಾತರು, ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗದವರಾಗಿರುತ್ತಾರೆ. ಅಹಿಂದ ನಾಯಕರಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಹಿಂದ ದವರಿಂದಲೇ ಲೂಟಿ ಹೊಡೆಯುತ್ತಿರುವುದು ನೈತಿಕ ಅಧಃಪತನಕ್ಕಿಳಿದಿರುವುದಕ್ಕೆ ಸಾಕ್ಷಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಪದೋನ್ನತಿ, ವರ್ಗಾವಣೆ ವಿಚಾರಗಳಲ್ಲಿ ಅಧಿಕಾರಿಗಳ ಬಳಿ ಹಣ ಪಡೆದರೆ ಅಧಿಕಾರಿಗಳು ಪುನಃ ಆ ಹಣವನ್ನು ಎಲ್ಲಿಂದ ಪಡೆಯುತ್ತಾರೇ? ಅಧಿಕಾರಿಗಳ ಬಳಿ ಹಣ ಪಡೆದು ಮಂತ್ರಿಗಳು ಭ್ರಷ್ಟಾಚಾರ ನಡೆಸಿದರೆ ಕೊಟ್ಟಿರುವ ಹಣವನ್ನು ಹಿಂಪಡೆಯಲು ಅಧಿಕಾರಿಗಳು ಮತ್ತೆ ಭ್ರಷ್ಟಾಚಾರ ಮಾಡಲು ಮುಂದಾಗುತ್ತಾರೆ. ಭ್ರಷ್ಟಾಚಾರ ತಡೆಯಬೇಕಾದ ಜಾಗದಲ್ಲಿ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ. ಆದ್ದರಿಂದ ಭ್ರಷ್ಟ ಮಂತ್ರಿಯಾದ ಬಿ ಆರ್ ತಿಮ್ಮಾಪುರ ರವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ಕಾರದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.
ಗಂಗಾವತಿ: ಗಂಗಾವತಿ ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಪ್ರಸಾದ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ಕೊಪ್ಪಳ: ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಅಗತ್ಯವಾಗಿರುವುದರಿಂದ, ಬಿಸಿ ಊಟದ ಜೊತೆಗೆ ಅವರಿಗೆ ಮೊಟ್ಟೆ ನೀಡಲಾಗುತ್ತಿದೆ. ಇತ್ತೀಚೆಗೆ, ಅಜೀಂ ಪ್ರೇಮ್…
ಬಾಗಲಕೋಟೆ: 35 ಲಕ್ಷ ರೂ. ಬ್ಯಾಂಕ್ ಸಾಲದ ಮರುಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ…
ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು, ಸಮನ್ಸ್ ಮತ್ತು ವಾರಂಟ್‌ಗಳನ್ನು ಜಾರಿ ಮಾಡದೆ, ನ್ಯಾಯಾಲಯಕ್ಕೆ ಸುಳ್ಳು ವರದಿಗಳನ್ನು…
ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಪ್ರಭಾವಿ ಫನ್ ಬಕೆಟ್ ಭಾರ್ಗವ್ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ…
ಹೈದರಾಬಾದ್‌ನ ಬಾಚುಪಲ್ಲಿಯ ರಾಜೀವ್ ಗಾಂಧಿ ನಗರದಲ್ಲಿ ಕೆಲಸದ ಒತ್ತಡದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆ…