ಕುಂದಗೋಳ; ತಾಲೂಕಿನ ಮುಳ್ಳೋಳಿ ಗ್ರಾಮದ ರಸ್ತೆ ಪಾಡು ಹೇಳ ತೀರದೂ ಅತಿವೃಷ್ಟಿಗೆ ಸಿಲುಕಿ ತೆಗ್ಗು ದಿನ್ನಿಯಿಂದ ಕಂಗೊಳಿಸುತ್ತಿರುವ ರಸ್ತೆ ನೋಡಿದರೆ ಇದೇನಾ ರಸ್ತೆ ದುರಸ್ತಿ? ಅಂತ ಪ್ರೆಶ್ನೆ ಉದ್ಭವವಾಗಿದೆ.
ಹೌದು ಈ ಹಿಂದೆ ಅತಿವೃಷ್ಟಿಗೆ ಹಾನಿಗೊಂಡ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಿತ್ತು. ಈ ರಸ್ತೆ ಸುಧಾರಣೆ ಪ್ರಯಾಣಿಕರಿಗೆ ನಿರಾಸೆ ಉಂಟುಮಾಡಿದೆ. ಎಲ್ಲಿ ನೋಡಿದರು ತೆಗ್ಗು-ಗುಂಡಿಗಳು, ರಸ್ತೆ ಏರಿಳಿತದಿಂದ ಕೊಡಿದ ರಸ್ತೆಗೆ ಗುಂಡಿ ಮುಚ್ಚುವುದರಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತದೆ. ಇನ್ನೂ ರಸ್ತೆ ನೋಡಿದರೆ ಗೊತ್ತಾಗುತ್ತೆ. ಎಷ್ಟರ ಮಟ್ಟಿಗೆ ದುರಸ್ತಿಗೊಂಡಿದೆ ಅಂತ
ಕಳೆದ ಬಾರಿ ಅತಿವೃಷ್ಟಿಗೆ ಹೀಡಾಗಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಬಳಿಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಧಿಕಾರಿಗಳು ಎಚ್ಚೆತ್ತು 1 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ದುರಸ್ತಿ ಎಂಬ ಕಾಮಗಾರಿ ಕೈಗೊಂಡು ಅರ್ಧಂಬರ್ಧ ದುರಸ್ತಿ ಗೊಳಿಸಿದ್ದಾರೆ. ಆದರೆ ಹಣ ಮಾತ್ರ ಸಂಪೂರ್ಣ ಸಂದಾಯವಾಗಿದೆ. ಜೊತೆಗೆ ಮುಕ್ತಾಯ ಪ್ರಮಾಣ ಪತ್ರ ಕೊಡ ಸರಕಾರಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹಾಗಾದರೆ ಅಧಿಕಾರಿಗಳು ಪರಿಶೀಲಸದೆ ಹೇಗೆ ? ಗುತ್ತಿಗೆದಾರನಗೆ ಹಣ ಸಂದಾಯ ಮಾಡಿದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.
ಹಾಗಾದರೆ ಸಾರ್ವಜನಿಕರಿಗೆ ಮಾಹಿತಿ ಕೊರತೆನಾ? ಅಥವಾ ಅಧಿಕಾರಿಗಳ ಜಾನತನವೋ ಒಂದು ಗೊತ್ತಿಲ್ಲ.
ಒಟ್ಟಿನಲ್ಲಿ ರಸ್ತೆ ದುರಸ್ತಿ ಮಾಡಿದ್ದೇವೆ ಎಂದು ಕೈ ತೊಳೆದುಕೊಂಡ ಬಿಟ್ಟಾರಾ. ಅನ್ನುವುದೇ ಅನುಮಾನ ಸಾರ್ವಜನಿಕ ರಲ್ಲಿ ಗೊಂದಲ ಉಂಟಾಗಿದೆ.
ವರದಿ; ಶಾನು ಯಲಿಗಾರ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…