ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿತ್ತು. ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ಲಿಂಗರಾಜ ಭಜಂತ್ರಿ (5), ರಕ್ಷಾ ಲಿಂಗಗರಾಜ ಭಜಂತ್ರಿ (3), ಹಸನ್ ಲಿಂಗರಾಜ ಭಜಂತ್ರಿ ಹಾಗೂ ಹುಸೇನ್ ಲಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳೀಯರು ಕಾಪಾಡಿದ್ದಾರೆ. ಆದ್ರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಹೌದು ಆರೋಪಿ ಲಿಂಗರಾಜು ನಾಟಕಕ್ಕೆ ತನು, ರಕ್ಷಾ, ಹಸೇನ್‌, ಹುಸೇನ್‌ ಮಕ್ಕಳು ದುರಂತ ಸಾವು ಕಂಡಿವೆ. ಲಿಂಗರಾಜು ಪತ್ನಿ ಭಾಗ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದ ಘಟನೆಯನ್ನು ಸಂಬಂಧಿಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಆಕೆಯ ಪತಿ ನಿಜ ಬಣ್ಣ ಬಯಲಾಗಿದೆ.

ಮಹಿಳೆ ಎಳೆಎಳೆಯಾಗಿ ಬಿಚ್ಚಿಟ್ಟ ವಿಚಾರ?
ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ. ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ. ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ವಿಜಯಪುರದಲ್ಲಿ ನಾಲ್ವರು ಮಕ್ಕಳ ಜೋತೆ ಕಾಲುವೆಗೆ ಜಿಗಿದ ಮಹಿಳೆ: ಕಂದಮ್ಮಗಳು ಸಾವು..

Leave a Reply

Your email address will not be published. Required fields are marked *

error: Content is protected !!