ಬೆಂಗಳೂರಿನ ಲಾಲ್ಬಾಗ್ ನಲ್ಲಿ ನಡೆಯುತ್ತಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ವೀಕೆಂಡ್ನಲ್ಲಿ ಹೆಚ್ಚಿನ ಪ್ರಮಾಣದ ಜನರು ಲಾಲ್ ಬಾಗ್ನ ವೀಕ್ಷಿಸಲು ಬಂದಿದ್ದು ಅದ್ಭುತವಾದ ಫಲ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ.
ಆಗಸ್ಟ್ 15 ರವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು ಸ್ವತಂತ್ರ ದಿನವಾದ ಆಗಸ್ಟ್ 15ರಂದು ಇನ್ನು ಅದ್ದೂರಿಯಾಗಿ ಫಲ ಪುಷ್ಪ ಪ್ರದರ್ಶನ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಸುಮಾರು 7 ಲಕ್ಷ ಹೂಗಳನ್ನು ಫಲ ಪುಷ್ಪ ಪ್ರದರ್ಶನಕ್ಕೆ ಬಳಸಲಾಗಿದೆ. ಹೂವಿನಲ್ಲಿ ಮಾಡಿರುವಂತಹ ಹೆಣ್ಣು, ರೈಲು, ನವಿಲು, ವಿಧಾನಸೌಧ ಹೀಗೆ ಹಲವು ಬಗೆಯ ಹೂವಿನ ಆಕಾರಗಳು ಜನರನ್ನು ಆಕರ್ಷಿಸುತ್ತಿವೆ.
ಫಲ ಪುಷ್ಪ ಪ್ರದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೇರವಾಗಿ ಬಂದು ನೋಡಲಾಗದವರು ವಿಡಿಯೋಗಳಲ್ಲಿ ನೋಡಿ ಆನಂದಿಸುತಿದ್ದಾರೆ.

https://www.youtube.com/watch?v=Mxopc6MfYJI

ಲಾಲ್ ಬಾಗ್ನ ಪ್ರವೇಶ ಶುಲ್ಕ ರಜೆ ದಿನದಲ್ಲಿ ವಯಸ್ಕರಿಗೆ 80 ಹಾಗೂ ಉಳಿದ ದಿನದಂದು 70 ಮತ್ತು ಮಕ್ಕಳಿಗೆ 30 ರುಪಾಯಿ, ಹಾಗೂ ಶಾಲಾ ಸಮವಸ್ತ್ರದಲ್ಲಿ ಬಂದಂತಹ ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೂ ಜನರು ಪ್ರದರ್ಶನವನ್ನು ನೋಡಬಹುದಾಗಿದೆ.

error: Content is protected !!