ತುಮಕೂರಿನ ಪಾಂಡುರಂಗ ನಗರದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಇದೇ ತಿಂಗಳು 22 ನೇ ತಾರೀಕು ಸುಮಾರು ಮಧ್ಯಾಹ್ನ 2 ಗಂಟೆಯಿಂದ ಎರಡು ಮೂವತ್ತರ ಸುಮಾರಿಗೆ ಕಳ್ಳತನವಾಗಿದ್ದು ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಧ್ಯಾಹ್ನದ ಸಮಯಕ್ಕೆ ಮಗುವಿಗೆ ಅಮ್ಮ ಆಗಿದೆ ದೇವರ ತೀರ್ಥವನ್ನು ನೀಡಿ ಎಂದು ಅಪರಿಚಿತ ವ್ಯಕ್ತಿಗಳು ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದು ಆ ಸಂದರ್ಭದಲ್ಲಿ ದೇವಸ್ಥಾನ ಮುಚ್ಚಿರುತ್ತದೆ.
ಮಗುವಿಗೆ ಅಮ್ಮ ಆಗಿರುವುದನ್ನು ತೋರಿಸಿ ತಾವು ಈಗ ಬಂದು ದೇವರ ತೀರ್ಥವನ್ನು ಕೊಡಲೇಬೇಕು ಎಂದು ಅರ್ಚಕರಿಗೆ ಬಲವಂತ ಮಾಡಿರುತ್ತಾರೆ. ಅವರು ಬಲವಂತ ಮಾಡಿದ ಬಳಿಕ ದೇವಸ್ಥಾನದ ಗೇಟ್ ಅನ್ನು ತೆರೆದು ಒಳಗೆ ಪ್ರವೇಶಿಸುವ ಅಷ್ಟರಲ್ಲಿ ಅರ್ಚಕರಿಗೆ ಮತ್ತು ಬರುವಂತಹ ಪುಡಿಯನ್ನು ಎರಚಿ ದೇವಿಯ ಕಿರೀಟ ಹಾಗೂ ಮಾಂಗಲ್ಯವನ್ನು ಕಳ್ಳತನ ಮಾಡಿರುತ್ತಾರೆ.
ಪ್ರಜ್ಞೆ ಬಂದ ಬಳಿಕ ಅರ್ಚಕರು ಕಳ್ಳತನವಾಗಿರುವ ಬಗ್ಗೆ ಅರಿತು ತುಮಕೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.