ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ, 2 ಅಸಲಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಲು ನೀಡಿ, ರೂ. 5 ಸಾವಿರ ಹಣವನ್ನು ಫೋನ್ ಫೇ ಮೂಲಕ ಹಾಕಿಸಿಕೊಂಡು 20 ನಕಲಿ ನಾಣ್ಯ ನೀಡಿ ಮೋಸ ಮಾಡಿದ ಪ್ರಕರಣದಲ್ಲಿ 3 ಜನ ಆರೋಪಿಗಳನ್ನು CEN ಪೊಲೀಸ್ ಠಾಣೆಯ ತಂಡ ವಶಕ್ಕೆ ಪಡೆದಿದ್ದು.
ಆರೋಪಿಗಳಿಂದ ರೂ. 5,000.00 ನಗದು, ಸಾರ್ವಜನಿಕರಿಗೆ ಮೋಸದಿಂದ ಮಾರಾಟ ಮಾಡಲು ಇಟ್ಟುಕೊಂಡಿದ್ದ 1.95 ಕೆ.ಜಿ. ತೂಕದ ತ್ರಾಮದ ನಾಣ್ಯಗಳು, 3 ಮೊಬೈಲ್ ಫೋನ್ ಗಳು, ಒಂದು ಕಾರು ಮತ್ತು 2 ಅಸಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇವರುಗಳು ಈ ಹಿಂದೆ ಇದೇ ರೀತಿ ಆಂದ್ರ ಪ್ರದೇಶ ರಾಜ್ಯದ ತಿರುಪತಿಯಲ್ಲಿ ರೂ. 50,000.00 ಬೆಲೆಗೆ, ಮಹಾರಾಷ್ಟ್ರ ರಾಜ್ಯದ ಪಂಡರಪುರದಲ್ಲಿ 2 ಲಕ್ಷ ಬೆಲೆಗೆ ಮತ್ತು ಹುಬ್ಬಳ್ಳಿಯಲ್ಲಿ 1.70 ಲಕ್ಷ ಬೆಲೆಗೆ ನಕಲಿ ನಾಣ್ಯಗಳನ್ನು ಸಾರ್ವಜನಿಕರಿಗೆ ವಂಚಿಸಿ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲು ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಪಿ.ಐ. ಶ್ರೀ. ಮುತ್ತರಾಜ್, ಪಿ.ಎಸ್.ಐ. ಶ್ರೀ. ನಾಸೀರ್ ಹುಸೇನ್ ಮತ್ತು ಶ್ರೀ. ರಘುನಾಥ್ ಎಸ್. ವಿ., ಎ.ಎಸ್.ಐ. ಶ್ರೀ. ಎಂ. ಸಿ. ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಶ್ರೀ. ವಿನಾಯಕ, ಶ್ರೀ. ರಾಜು, ಶ್ರೀ. ಇಮ್ರಾನ್ ಖಾನ್, ಶ್ರೀ. ಅನ್ವರ್ ಪಾಷಾ,ಶ್ರೀ. ರಮೇಶ, ಶ್ರೀ. ಹರೀಶ್, ಶ್ರೀ. ಮಹೇಂದ್ರ ಮತ್ತು ಶ್ರೀ. ಧರ್ಮರಾಜ್ ರವರು ಭಾಗವಹಿಸಿದ್ದರು.
error: Content is protected !!