ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯಚರಣೆ ದಿ.09-11-2022 ರಿಂದ ದಿ.08-12-2022ರ ವರೆಗೆ ಜಿಲ್ಲೆಯಾದ್ಯಂತ ನಡೆಸಿ ಈ ಅವಧಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಕೈಬಿಡುವ ಹಾಗೂ ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿ ಕಳೆದ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 10,98,549 ಪುರುಷರು ಮತ್ತು 10,72,662 ಮಹಿಳೆಯರು ಸೇರಿದಂತೆ 21,71,211 ಮತದಾರರಿದ್ದಾರೆ
ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ವಿಧಾನಸಭಾ ಅಫಜಲಪುರ ಕ್ಷೇತ್ರದಲ್ಲಿ 1,15,002 ಪುರುಷರು ಮತ್ತು 1,08,801 ಮಹಿಳೆಯರು ಸೇರಿ 2,23,803 ಮತದಾರರಿದ್ದಾರೆ.
ವರದಿ ನಾಗರಾಜ್ ಗೊಬ್ಬುರ್