ಅಂಕೋಲಾ ಹಾಗೂ ಕಾರವಾರ ತಾಲೂಕಿಗೆ ಸಂಪರ್ಕಿಸುವ ರಸ್ತೆಯಲ್ಲಿ ಕಾರವಾರದ ಹತ್ತಿರ ಬೀಣಗಿಯಲ್ಲಿ ಗುಡ್ಡ ಕೊರೆದು ಸುರಂಗ ಮಾರ್ಗವನ್ನು ನಿರ್ಮಿಸಲಾಗಿತ್ತು , ಈಗ ಅದು ಬಿಟ್ಟು ಬಿಡದ ಮಳೆಯಿಂದಾಗಿ ಗುಡ್ಡದ ಮೇಲಿನ ಕಲ್ಲು ಮಣ್ಣು ಕುಸಿದು ಸುರಂಗ ಮಾರ್ಗದ ಪ್ರವೇಶ ದ್ವಾರದಲ್ಲಿ ಬಿದ್ದ ಪರಿಣಾಮ ತಾತ್ಕಾಲಿಕವಾಗಿ ಅಂಕೋಲಾ ಕಡೆಯಿಂದ ಹೋಗುವ ಕಾರವಾರದ ಸುರಂಗ ಮಾರ್ಗವನ್ನು ಬಂದ್ ಮಾಡಲಾಗಿದೆ ,ಸ್ಥಳದಲ್ಲಿ ಐ ಆರ್ ಬಿ ಇಂದ ಮಣ್ಣು ತೆರವು ಗೊಳಿಸಗಿದೆ, ಅಂಕೋಲಾ ದಿಂದ ಕಾರವಾರಕ್ಕೆ ತೆರಳುವ ವಾಹನಗಳಿಗೆ ಬೈತ್ಕೋಲ ಮಾರ್ಗದಿಂದ ಸಂಚರಿಸಲು ಸೂಚಿಸಲಾಗಿದೆ, ಬಿಣಗ ಬಳಿ ಇರುವ ಈ ಸುರಂಗ ಮಾರ್ಗದ ಮೇಲಿಂದ ಮಳೆಗಾಲದಲ್ಲಿ ಜಲಪಾತದಂತೆ ನೀರು ಹರಿಯುತ್ತದೆ, ಹಿಂದಿನ ವರ್ಷವೂ ಕೂಡ ಬಂದ್ ಮಾಡಲಾಗಿತ್ತು, ಮಳೆ ಕಡಿಮೆಯಾದ ನಂತರ ಅಧಿಕಾರಿಗಳ ಸೂಚನೆ ಮೇರೆಗೆ ಮತ್ತೆ ಸಂಚಾರ ಆರಂಭಗೊಂಡಿತ್ತು, ಈ ವರ್ಷವೂ ಸಹ ಗುಡ್ಡ ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಎದುರಾಗಿದೆ,

ವರದಿ : ಶ್ರೀಪಾದ್ ಎಸ್
error: Content is protected !!