ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರವೀಂದ್ರ ನಗರದ ಶಕ್ತಿ ಗಣಪತಿ ದೇವಸ್ಥಾನದ ಕಾಣಿಕೆಯ ಹುಂಡಿಯನ್ನು ಕಳುವು ಮಾಡಿದ ಘಟನೆ ದೀ 3/10/2022 ರಂದು ರಾತ್ರಿ ಯಲ್ಲಾಪುರದಲ್ಲಿ ನಡೆದಿದೆ . ನಮ್ಮೆರನ್ನು ರಕ್ಷಿಸು ನಮ್ಮ ಇಷ್ಟಾರ್ಥವನ್ನು ನೆರವೇರಿಸಲು ನಮಗೆಲ್ಲರಿಗೂ ಆಯುಷ್ಯ ಆನಂದ ಆರೋಗ್ಯವನ್ನು ನೀಡಿ ಕಾಪಾಡು ಎಂದು ಬೇಡಿಕೊಳ್ಳಲು ನಾವು ದೇವರ ಬಳಿ ದೇವಸ್ಥಾನಕ್ಕೆ ಹೋಗುತ್ತೇವೆ.ಹಾಗೂ ದೇವರಿಗೆ ಕಾಣಿಕೆ ಹಾಕಿ ನಮ್ಮ ಕಷ್ಟಗಳನ್ನು ದೂರಮಾಡು ಎಂದು ಬೇಡಲು ದೇವಸ್ಥಾನಕ್ಕೆ ಹೋಗುತ್ತೇವೆ.ಆದರೆ ಯಲ್ಲಾಪುರದ ರವೀಂದ್ರ ನಗರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ರಾತ್ರಿ ಬಂದ ಕಳ್ಳರು ದೇವಸ್ಥಾನದ ಬಾಗಿಲು ಒಡೆದು ದೇವರಿಗೆ ಅರ್ಪಿಸಿದ ಕಾಣಿಕೆ ಸುಮಾರು 10000 ಮೌಲ್ಯವಾಗಿದ್ದು ಭಕ್ತರು ಅರ್ಪಿಸಿದ ಕಾಣಿಕೆ ಸುಮಾರು 7000 ಸಾವಿರ ಚಿಲ್ಲರೆ ಹಣ ಇರುವುದೆಂದು ಆಡಳಿತ ಮಂಡಳಿಯವರು ಊಹಿಸಿದ್ದಾರೆ. ಈ ಕುರಿತು ಯಲ್ಲಾಪುರದ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ .
ವರದಿ: ಶ್ರೀಪಾದ್ ಹೆಗಡೆ