ಬೆಂಗಳೂರಿನ ಲಗ್ಗೆರೆಯ ನಿವಾಸ ಒಂದರಲ್ಲಿ ಜನವರಿ 27ರಂದು ಸಂಜೆ ಸುಮಾರಿಗೆ ಮನೆಗೆ ನುಗ್ಗಿ ಕದೀಮರು ಸಿಲೆಂಡರ್ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಪೂರ್ಣ ಗ್ಯಾಸ್ ತುಂಬಿರುವಂತಹ ಸಿಲಿಂಡರ್ ಅನ್ನು ಸಿಲೆಂಡರ್ ನ ಕೋಣೆಯೊಳಗೆ ಇಟ್ಟು ಬೀಗ ಹಾಕಿದ್ದು ಅದನ್ನು ನೋಡಿಕೊಂಡಿರುವಂತಹ ಕದೀಮರು ಸಂಜೆ ಸುಮಾರಿಗೆ ಯಾರು ಇಲ್ಲದಂತಹ ಸಂದರ್ಭದಲ್ಲಿ ಬೀಗವನ್ನು ಹೊಡೆದು ಸಿಲಿಂಡರ್ ಕದ್ದೊಯ್ದಿದ್ದಾರೆ.
ಸಿಲಿಂಡರ್ ಕದಿಯುವಂತಹ ಸಂದರ್ಭದಲ್ಲಿ ಇಬ್ಬರು ಕದೀಮರು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಒಬ್ಬ ಗೇಟ್ ನ ಬಳಿ ನಿಂತು ಯಾರಾದರೂ ಬರುತ್ತಾರಾ ಎಂದು ಕಾಯುತ್ತಿದ್ದಾರೆ ಇನ್ನೊಬ್ಬ ಬೀಗವನ್ನು ಹೊಡೆದು ಸಿಲಿಂಡರ್ ಹೊತ್ತೊಯ್ಯುತ್ತಾನೆ. ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಹೊಡೆದಿರುವ ಬೀಗವನ್ನು ಸಹ ಕದಿಮರೆ ಕೊಂಡೊಯ್ಯದಿದ್ದಾರೆ. ಆದಕಾರಣ ಮನೆಯವರಿಗೆ ಸಿಲೆಂಡರ್ ಕಳವಾಗಿರುವ ವಿಚಾರ ತಡವಾಗಿ ತಿಳಿದಿದ್ದು ಸಿಸಿಟಿವಿ ಪರಿಶೀಲಿಸಿದ ಬಳಿಕ ಸಂಪೂರ್ಣ ಚಿತ್ರಣದ ಅರಿವಾಗಿರುತ್ತದೆ.
ಈ ವಿಚಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.