Latest

ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ: 5 ಕೋಟಿ ಬೇಡಿಕೆ ಇಟ್ಟ ಕಿಡ್ನಾಪರ್ಸ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ತಳವಾರ (48) ಅವರನ್ನು ಅಪಹರಣಕಾರರು ಫೆಬ್ರವರಿ 14ರ ರಾತ್ರಿ ಕಿಡ್ನಾಪ್ ಮಾಡಿದ್ದಾರೆ.

ಅಪಹರಣದ ಬಳಿಕ ಅಪಹರಣಕಾರರು ಅವರ ಕುಟುಂಬಸ್ಥರೊಂದಿಗೆ ಸಂಪರ್ಕಕ್ಕೆ ಬಂದು, ಬಸವರಾಜ್ ಅವರನ್ನು ಬಿಡುಗಡೆ ಮಾಡಲು 5 ಕೋಟಿ ರೂಪಾಯಿ ಹಣ ನೀಡುವಂತೆ ಪೀಡಿಸಿದ್ದಾರೆ. ನಿರ್ದಿಷ್ಟ ಸ್ಥಳಕ್ಕೆ ಹಣ ತರಲು ಸೂಚಿಸಿದರೂ, ಹಣವನ್ನು ಪಡೆಯದೇ, ತಾವು ಬೇರೆ ಸ್ಥಳಕ್ಕೆ ಹೋಗುತ್ತಿರುವುದಾಗಿ ಅಪಹರಣಕಾರರು ತಿಳಿಸಿ ಮತ್ತೊಂದು ಬೆದರಿಕೆ ಹಾಕಿದ್ದಾರೆ.

ಘಟನೆ ಕುರಿತು ಬಸವರಾಜ್ ಕುಟುಂಬಸ್ಥರು ತಡರಾತ್ರಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಫೋನ್ ಲೊಕೇಷನ್ ಆಧರಿಸಿ ಅಪಹರಣಕಾರರ ಜಾಡು ಹಿಡಿಯಲು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಹರಣಕಾರರ ತಂಡ ನಿಪ್ಪಾಣಿ ಪ್ರದೇಶದಲ್ಲಿ ಅಡಗಿರುವ ಸಾಧ್ಯತೆಗಳು ವ್ಯಕ್ತವಾಗಿದ್ದು, ಅವರನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.

ಈ ಘಟನೆ ಗಂಭೀರ ತಿರುವು ಪಡೆದುಕೊಂಡಿದ್ದು, ಅಪಹರಣ ಮತ್ತು ಹಣ ವಶಕ್ಕೆ ಸಂಬಂಧಿಸಿದಂತೆ ಅಪಹರಣಕಾರರ ಉದ್ದೇಶ ಹಾಗೂ ಹಿನ್ನೆಲೆ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.

nazeer ahamad

Recent Posts

ಎಟಿಎಂ ಕಾರ್ಡ್‌ ಹಗರಣ: ₹30,000 ದೋಚಿದ ಆರೋಪಿ ಬಂಧನ

ಹಾವೇರಿ: ಎಟಿಎಂ ಕಾರ್ಡ್‌ ವಂಚನೆ ನಡೆಸಿದ ಪ್ರಕರಣದಲ್ಲಿ ಹಿರೇಮೊರಬ ಗ್ರಾಮದ ಗಿರೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ…

8 hours ago

ವಿದೇಶಿ ಉದ್ಯೋಗದ ಹೆಸರಿನಲ್ಲಿ 53 ಮಂದಿಗೆ ವಂಚನೆ, ದಂಪತಿಯ ಬಂಧನ

ಬೆಂಗಳೂರು, ಫೆಬ್ರವರಿ 21: ವಿದೇಶಿ ಉದ್ಯೋಗ ನೀಡುವ ಆಮಿಷವೊಡ್ಡಿ ಬರೋಬ್ಬರಿ 53 ಮಂದಿಗೆ ಕೋಟಿ, ಕೋಟಿ ರೂ ವಂಚಿಸಿ, ದಂಪತಿ…

8 hours ago

ಮೈಕ್ರೋ ಫೈನಾನ್ಸ್ ಕಿರುಕುಳ: ಸಾಲದ ಬಾಧೆ ತಾಳಲಾರದೆ ಗ್ರಾಮ ತೊರೆದ ಕುಟುಂಬಗಳು.

ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿರಂತರವಾಗಿ ಬೆಳೆಯುತ್ತಿದ್ದು, ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರಾಜ್ಯ…

9 hours ago

ಖಜೂರಿ ಯುವಕ ರಾಹುಲ್ ಹತ್ಯೆ: ಶವ ಪತ್ತೆ, ಪ್ರಮುಖ ಆರೋಪಿ ಪರಾರಿ

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಯುವಕ ರಾಹುಲ್, ಕಳೆದ ಜನವರಿ 30ರಿಂದ ಕಾಣೆಯಾಗಿದ್ದು, ಆತನ ಶವ ಮಹಾರಾಷ್ಟ್ರದ…

9 hours ago

ಲಿಂಗಸುಗೂರು: ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ; ಇಬ್ಬರು ಕೃಷಿ ಅಧಿಕಾರಿಗಳು ಅಮಾನತು.

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೃಷಿ ಇಲಾಖೆಯ…

11 hours ago

ಬೆಳಗಾವಿಯಲ್ಲಿ ಭಾಷೆಯ ತಕರಾರು: ಕನ್ನಡ ಮಾತಾಡಿದ ಕಂಡಕ್ಟರ್ ಮೇಲೆ ಹಲ್ಲೆ

ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭಾಷೆಯ ವಿವಾದ ಸ್ಫೋಟಗೊಂಡಿದ್ದು, ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಕ್ಕೆ ಕನ್ನಡದಲ್ಲಿ ಮಾತನಾಡಲು ಸೂಚಿಸಿದ ಬಸ್ ಕಂಡಕ್ಟರ್…

12 hours ago