
ಉಡುಪಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಅಪಹರಣ ಸಂಬಂಧ ಗಂಭೀರ ಆರೋಪಗಳು ಎದುರಾಗಿದ್ದು, ಮೊಹಮ್ಮದ್ ಅಕ್ರಮ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಹೃತೆಯ ತಂದೆ ಗಾಡ್ವಿನ್ ದೇವದಾಸ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, “ಅಕ್ರಮ್ ನನ್ನ ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆಯಾಗಲು ಯತ್ನಿಸುತ್ತಿದ್ದಾನೆ” ಎಂದು ಆರೋಪಿಸಿದ್ದಾರೆ.
ಕಾಲೇಜಿನಿಂದ ಮನೆಗೆ ಮರಳುವಾಗ ಅಪಹರಣ
ಪೀಡಿತ ವಿದ್ಯಾರ್ಥಿನಿ ಕ್ರೈಸ್ತ ಸಮುದಾಯಕ್ಕೆ ಸೇರಿದ್ದು, ಕಾಲೇಜಿನಿಂದ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದಾಳೆ. ಈ ಹಿಂದೆ ಕೂಡ ಅಕ್ರಮ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಆದರೆ, ಅಕ್ರಮ್ ಮೇಲೆ ಕಿರುಕುಳದ ಸಾಕ್ಷ್ಯಗಳ ಕೊರತೆಯಿಂದ ಐದು ವರ್ಷಗಳ ಹಿಂದೆ ಪ್ರಕರಣ ವಜಾಗೊಂಡಿತ್ತು.
“ಆಗ ತಮಗೆ ಶಿಕ್ಷೆ ತಪ್ಪಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನನ್ನ ಮಗಳನ್ನು ಅಪಹರಿಸಿದ್ದಾನೆ” ಎಂದು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ. ಅಲ್ಲದೆ, ಈ ವೇಳೆ ಅಕ್ರಮ್ ಅವಳನ್ನು ಬಲವಂತವಾಗಿ ವಿವಾಹ ನೋಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ಅವರು ದೂರಿದ್ದಾರೆ.
ಇನ್ಸ್ಟಾಗ್ರಾಂ ಸ್ನೇಹದಿಂದ ಶೋಷಣೆ?
ಪೀಡಿತೆ ಮತ್ತು ಆರೋಪಿಯ ಪರಿಚಯ ಇನ್ಸ್ಟಾಗ್ರಾಂ ಮೂಲಕವಾದುದು. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಅಕ್ರಮ್, ನಗ್ನ ಚಿತ್ರಗಳು ಹಾಗೂ ಖಾಸಗಿ ವೀಡಿಯೋಗಳನ್ನು ಪಡೆದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎಂದು ಪೀಡಿತೆಯ ತಂದೆ ಆರೋಪಿಸಿದ್ದಾರೆ.
“ಅವನು ನಮ್ಮ ಮಗಳನ್ನು ಪುಸಲಾಯಿಸಿ ಅಶ್ಲೀಲ ಫೋಟೋಗಳು, ವಿಡಿಯೋಗಳನ್ನು ಪಡೆದುಕೊಂಡಿದ್ದಾನೆ. ಈಗ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸುತ್ತಿದ್ದಾನೆ. ನಮ್ಮ ಮಗಳನ್ನು ಸುರಕ್ಷಿತವಾಗಿ ಮನೆಗೆ ತರಲು ಪೊಲೀಸರ ನೆರವಿನ ಅಗತ್ಯವಿದೆ” ಎಂದು ದೇವದಾಸ್ ಮನವಿ ಮಾಡಿದ್ದಾರೆ.
ಗ್ಯಾಂಗ್ ಸಂಪರ್ಕದ ಅನುಮಾನ
ಇನ್ನು ಮೊಹಮ್ಮದ್ ಅಕ್ರಮ್ ಉಡುಪಿಯ ಗರುಡ ಗ್ಯಾಂಗ್ ಸದಸ್ಯನಾಗಿರುವ ಸಾಧ್ಯತೆಯೂ ಕೇಳಿಬರುತ್ತಿದ್ದು, ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಚರಣೆ ನಡೆಸಿದ್ದಾರೆ.
ಉಡುಪಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಮುಂದುವರಿದಿದೆ. ಶೀಘ್ರದಲ್ಲೇ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.