ಮನುಷ್ಯನಿಗೆ ಹುಟ್ಟು ಸಾವು ಯಾವ ಸಮಯಕ್ಕೆ ಆಗಬೇಕೋ ಅದೂ ಯಾರ ಕೈಯಲ್ಲೂ ಇರುವುದಿಲ್ಲ ಮನುಷ್ಯ ಭೂಮಿ ಮೇಲೆ ಜನನವಾದ ನಂತರ ಅವನು ಒಂದು ಒಳ್ಳೆಯ ಹೆಸರು ಸಂಪಾದಿಸಬೇಕು ಎಲ್ಲರಿಗೂ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನು ಬಯಸಿ ಸಾಯುವ ವರೆಗೂ ಒಳ್ಳೆಯ ಸುಖಕರ ಜೀವನ ಮಾಡಬೇಕು ಆದರೇ ಅದೂ ಇತ್ತೀಚಿನ ದಿನಗಳಲ್ಲಿ ಒಂದು ರೋಗಿಗೋಸ್ಕರ ರಕ್ತ ದಾನ ಮಾಡಿ ಎಂದರೇ ಯಾರೂ ಮುಂದೆ ಬರಲ್ಲ ಕೇವಲ ಬೆರಳೆಣಿಕೆ ಅಷ್ಟು ಮಾತ್ರ. ರಕ್ತದಾನ ಮಾಡಲು ಮುಂದೆ ಬರುತ್ತಾರೆ ಮನುಷ್ಯ ಮನುಷ್ಯನಿಗೆ ಆಗಬೇಕು ಪ್ರಾಣಿ ಮರಗಳಿಗೆ ಅಲ್ಲ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯೆರ ತಂಡ ಹಗಲಿರುಳು ರೋಗಿಗಳ ಆರೈಕೆಗೆ ಮುಂದಾಗಿ ರೋಗಿಗಳು ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಆರೋಗ್ಯವಾಗಿರಲಿ ಎಂಬುದು ಕಿಮ್ಸ್ ಆಸ್ಪತ್ರೆಯ ವೈದ್ಯರ ಅಧೀಕ್ಷಕರ ನಿರ್ದೇಶಕರ ಆಸೆ.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಪ್ರಕಾಶ್ ಲಂಬಾಣಿ ಎಂಬ ವ್ಯೆಕ್ತಿಗೆ ತಲೆಯ ಭಾಗದಲ್ಲಿ ತುಂಬಾ ಪೆಟ್ಟಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು ಆದರೇ ವಿಧಿ ಆಟವೇ ಬೇರೆಯಾಗಿತ್ತು ಚಿಕಿತ್ಸೆ ಫಲಿಸದೇ ಪ್ರಕಾಶ್ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು ಹಾಗೂ ಅವರ ಯಕೃತ್ ಕಿಡ್ನಿ ಇನ್ನೂ ಕಾರ್ಯ ನಿರ್ವಹಿಸುತ್ತಿತ್ತು ಅಂಗಾಂಗ ದಾನದ ತಂಡ ಮತ್ತು ಕಿಮ್ಸ್ ಆಸ್ಪತ್ರೆಯ ಅಧೀಕ್ಷಕರು ಚರ್ಚಿಸಿ ಪ್ರಕಾಶ್ ಅವರ ಕುಟುಂಬದವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಕುಟುಂಬದವರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಜೆ ಪಿ ನಗರದಲ್ಲಿರುವ ಸುಪ್ರಸಿದ್ದ ಆರ್ ವಿ ಆಸ್ಪತ್ರೆಯಲ್ಲಿನ ರೋಗಿಯೊಬ್ಬರಿಗೆ ಯಕೃತ್ ಕಸಿ ಅಗತ್ಯೆವಿದ್ದ ಕಾರಣ ಅಲ್ಲಿಯ ವೈದ್ಯರ ತಂಡ ಬಂದು ಯಕೃತ್ ತೆಗೆದು ತಮ್ಮಲ್ಲಿಯೇ ದಾಖಲಾದ 39 ವರ್ಷದ ವ್ಯಕ್ತಿಗೆ ಪ್ರಕಾಶ್ ಅವರ ಕಿಡ್ನಿ ಕಸಿ ಮಾಡಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ರವರು ತಿಳಿಸಿದ್ದಾರೆ.
ವೈದ್ಯರ ಕೋರಿಕೆಯ ಮೇಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ವರೆಗೆ ಸುಮಾರು 6 ರಿಂದ 7 ಕಿ ಮೀ ರಸ್ತೆಯನ್ನು 0 ಟ್ರಾಫಿಕ್ ಆಗಿ ಮಾಡಿಸಲಾಗಿತ್ತು ಪ್ರಕಾಶ್ ಅವರ ಕಿಡ್ನಿ ತೆಗೆದುಕೊಂಡ ವೈದ್ಯರ ತಂಡ ಕೇವಲ 2 ರಿಂದ 3 ನಿಮಿಷಗಳ ಅಂತರದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿ ನಂತರ ಅಲ್ಲಿಂದ ಸ್ಟಾರ್ ಏರ್ ವಿಮಾನದ ಮೂಲಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಮೆದುಳು ನಿಷ್ಕ್ರಿಯಗೊಂಡ ವ್ಯೇಕ್ತಿಯ ಅಂಗಾಂಗ ತೆಗೆದಿರುವ ಕಾರ್ಯ ಈ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ಇದೇ ಮೊದಲು ಎಂದು ಹೇಳಬಹುದು ಉತ್ತರ ಕರ್ನಾಟಕದ ಕಿಮ್ಸ್ ( ಸಂಜೀವಿನಿ ) ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಯ ಮತ್ತು ಕಾಲೇಜಿನಲ್ಲಿ ಇದು ಹೆಮ್ಮೆ ಪಡುವ ಒಂದು ಸಾಧನೆ. ಈ ಮೂಲಕ ಹುಬ್ಬಳ್ಳಿಯ ಕಿಮ್ಸ್ ಹೊಸ ಇತಿಹಾಸ ನಿರ್ಮಿಸಿದೆ ಕೆಲವು ತಿಂಗಳ ಹಿಂದೆ ಇಲ್ಲಿನ ವೈದ್ಯರು ಜೀವಂತ ವ್ಯೆಕ್ತಿಗಳು ದಾನ ಮಾಡಿರುವ ಕಿಡ್ನಿ ತೆಗೆದು ಕಸಿ ಮಾಡಿರುವ ಸಾಧನೆ ಮಾಡಿದ್ದರು ಇನ್ನೂ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಅಧೀಕ್ಷಕರು ಮತ್ತು ನಿರ್ದೇಶಕರು ಇಂತಹ ಹಲವಾರು ಸಾಧನೆಗಳನ್ನು ಯಶಸ್ವಿಯಾಗಿ ಮಾಡಿ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಿ ಎಲ್ಲ ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯ.
ಈ ಸಾಧನೆಗೆ ಪಾತ್ರರಾದ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಅಧೀಕ್ಷಕರಾದ ಡಾ. ಅರುಣಕುಮಾರ್ ಚವ್ಹಾಣ್ ಮತ್ತು ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರತಾನಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು
ವರದಿ : ಶಿವ ಹುಬ್ಬಳ್ಳಿ .