ಮಾದಕ ವ್ಯಸನಿಯಾಗಿದ್ದ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಚಕ್ಕಿವಾಲದಲ್ಲಿ ನಡೆದಿದೆ.
ಪತಿ ಪರಮಜಿತ್ ಸಿಂಗ್ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್ ಸೇವಿಸಲು ತನ್ನ ಹೆಂಡತಿ ಬಳಿ ಹಣ ಕೇಳಿರುತ್ತಾನೆ. ಡ್ರಗ್ಸ್ಗಾಗಿ ಹಣ ಕೊಡಲು ಹೆಂಡತಿ ನೀಲಂ ರಾಣಿ ನಿರಾಕರಿಸಿದಾಗ ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪತ್ನಿಯ ತಲೆಗೆ ಬಾಣಲೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಹಂತಕ ಪತಿ ತನ್ನ ಪತ್ನಿಯ ಮೇಲೆ ಮೊದಲು ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಕುಡುಗೋಲು ಮುರಿದಾಗ ಬಾಣಲೆಯಿಂದ ಪತ್ನಿಯ ತಲೆಗೆ 10 ಬಾರಿ ಹೊಡೆದಿದ್ದಾನೆ. ಈ ಪರಿಣಾಮ ತೀವ್ರ ರಕ್ತಸ್ರಾವದಿಂದ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮುಖ್ಯಸ್ಥ ದಲ್ಜಿತ್ ಸಿಂಗ್ ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಮೃತಳ ಅತ್ತೆ ಮಾತನಾಡಿ, ನನ್ನ ಮಗ ಮಾದಕ ವ್ಯಸನಿಯಾಗಿದ್ದು, ಈ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.
ಆರೋಪಿ ಪರಮಜಿತ್ ಸಿಂಗ್ ಈ ಹತ್ಯೆ ನಡೆಸಿದ ನಂತರ ಮೊಗ ಪೊಲೀಸ್ ಠಾಣೆಗೆ ತೆರಳಿ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ವಿಷಯ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ