ಹಾಸನ (ಜ.23): ಹೊಳೆನರಸೀಪುರದ ದರ್ಜಿ ಬೀದಿಯಲ್ಲಿ ಬೆಳಿಗ್ಗೆ ವೇಳೆ ಕಂಡು ಬಂದ ಒಂದು ಆಘಾತಕಾರಿ ಘಟನೆ, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತು. ಚರಂಡಿಯಲ್ಲಿ ಪತ್ತೆಯಾದ ಹಾವುಗಳ ಚರ್ಮ ಮತ್ತು ಅವಶೇಷಗಳು ಕಿಡಿಗೇಡಿಗಳ ಕ್ರೂರ ಕೃತ್ಯವನ್ನು ಬಹಿರಂಗಪಡಿಸಿವೆ. ವರದಿಗಳ ಪ್ರಕಾರ, ಹಾವುಗಳ ಚರ್ಮವನ್ನು ಸುಲಿದು ಅವುಗಳ ಮಾಂಸವನ್ನು ಬೇರ್ಪಡಿಸಿ ಬಿಸಾಡಲಾಗಿದೆ.
ಸ್ಥಳೀಯರು ಈ ಘಟನೆಯನ್ನು ಗಮನಿಸಿದ ನಂತರ, ಇದು ಹಾವುಗಳ ಮಾಂಸಕ್ಕಾಗಿ ಕೃತ್ಯ ನಡೆದಿರಬಹುದು ಎಂದು ಆಲೋಚಿಸುತ್ತಿದ್ದಾರೆ. ಹಾಸನ-ಮೈಸೂರು ರಸ್ತೆಯ ದರ್ಜಿ ಬೀದಿಯಲ್ಲಿ ನಡೆದಿದೆ ಈ ಘಟನೆ, ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವತಾ ಸ್ವರೂಪದಲ್ಲಿ ಪೂಜಿಸಲ್ಪಡುವ ಹಾವುಗಳನ್ನು ಕ್ರೂರವಾಗಿ ಸಾಯಿಸಿ, ಅವುಗಳ ಚರ್ಮವನ್ನು ಸುಲಿದು ಬಿಸಾಡಿದುದರಿಂದ ಜನರಲ್ಲಿ ಭೀತಿ ಮೂಡಿದೆ.
ಈ ಘಟನೆಯಲ್ಲಿ ಹೊಳೆನರಸೀಪುರದಲ್ಲಿ ಭಯಭೀತಿಯ ವಾತಾವರಣವು ಹಾವಿಯಾಗಿದೆ. ಪ್ರಸ್ತುತ, ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಕೃತ್ಯ ಹಿಂದಿನ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಪ್ರಯತ್ನದಲ್ಲಿದ್ದಾರೆ. ಪರಿಶೀಲನೆ ವೇಳೆ, ಹಾವುಗಳ ಮಾಂಸಕ್ಕಾಗಿ ಅಥವಾ ಮಾಂಸಾಹಾರ ಸೇವನೆಗಾಗಿ ಹಾವುಗಳನ್ನು ಹತ್ಯೆ ಮಾಡಿ, ಅವುಗಳ ಚರ್ಮ ಹಾಗೂ ಇತರ ಭಾಗಗಳನ್ನು ಚರಂಡಿಗೆ ಎಸೆದಿರುವುದಕ್ಕೆ ಕಿಡಿಗೇಡಿಗಳು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಖದೀಮರು ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಐದು ಕಡೆ ಸಿನಿಮೀಯ ಶೈಲಿಯಲ್ಲಿ ಕಳ್ಳತನ…
ಬೆಂಗಳೂರು: ಪತ್ನಿಯೊಂದಿಗೆ ಡಿವೋರ್ಸ್ ಕುರಿತು ನಡೆಯುತ್ತಿದ್ದ ಕಲಹದಲ್ಲಿ ವಿಫಲವಾದ ಪತಿ, ಆಕೆಯ ಮನವೊಲಿಸಲು ಪತ್ನಿಯ ಮನೆ ಬಳಿ ಹೋಗಿ, ಮನನೊಂದು…
ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಬಹಳಷ್ಟು ಕಷ್ಟಗಳು ಎದುರಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಎಲ್ಲಾ ಇಲಾಖೆಗಳಲ್ಲೂ ಬೇರುಹಾಸಿರುವ ಭ್ರಷ್ಟಾಚಾರ.…
ಮಂಗಳೂರು: ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಕಲರ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ರಾಮಸೇನೆಯ ಒಂಬತ್ತು…
ಲಾಯರ್ ಜಗದೀಶ್ ಅವರ ಮೇಲೆ ನಡೆದ ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ, ನಾಲ್ಕು-ಐದು ಮಂದಿ…
ಬೆಳಗಾವಿ: ತಾಯಿಯಿಲ್ಲದ ತಬ್ಬಲಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಬೇಕಿದ್ದ ಮಲತಾಯಿ ಮಗಳ ಹೊಟ್ಟೆಗೆ ಹೊಡೆದು ಹತ್ಯೆ ಮಾಡಿದ್ದ ಮಲತಾಯಿಯನ್ನು 8…