ಮಾರ್ಚ್ 5. ಈ ದಿನ ಬಂದರೆ ಸುದೀಪ್ ಮತ್ತು ದರ್ಶನ್ ಅಭಿಮಾನಿ ವಲಯದಲ್ಲಿ ಒಂದು ರೀತಿಯ ಕಾರ್ಮೋಡ ಕವಿದ ಭಾವ. ಏಕೆಂದರೆ, ಕಳೆದ ಆರು ವರ್ಷದ ಹಿಂದೆ ಇದೇ ದಿನ ನಟ ದರ್ಶನ್ ತಮ್ಮ ಒಂದೇ ಒಂದು ಮಾತಿನಿಂದ ಸುದೀಪ್ ಅವರ ಜತೆಗಿನ ಸ್ನೇಹಕ್ಕೆ ತಿಲಾಂಜಲಿ ಇಟ್ಟಿದ್ದರು. ಆವತ್ತು ಇಬ್ಬರ ಅಭಿಮಾನಿಗಳ ಹೃದಯ ಒಡೆದು ಚೂರಾಗಿತ್ತು. ಇದೀಗ ಮಾರ್ಚ್ 5 ಕ್ಕೆ ಆ ಘಟನೆ ನಡೆದು 6 ವರ್ಷಗಳು ಕಳೆದಿವೆ.