ಮನುಷ್ಯನ ಜೀವಕ್ಕೇ ಬೆಲೆ ಇಲ್ಲವೇನೋ ಎಂಬ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ವ್ಯೆಕ್ತವಾಗುತ್ತಿದೆ. ಕೇವಲ ಚಿಲ್ಲರೆ ಹಣಗಳಿಗೋಸ್ಕರ ಮಾರಣಾಂತಿಕ ಹಲ್ಲೆ ಮತ್ತು ದೌರ್ಜನ್ಯದಿಂದ ಚಾಕು ಇರಿತ ನಡೆಯುತ್ತಿವೆ. ಕಳೆದ 28/09/20022 ರಂದು ಹಾಡ ಹಗಲೇ ಇಂತಹ ಒಂದು ಘಟನೆ ಹುಬ್ಬಳ್ಳಿಯ ಕಸಬಾ ಪೇಟ್ ವ್ಯಾಪ್ತಿಯಲ್ಲಿನ ಕೊತ್ತಂಬರಿ ಆಟೋ ಸ್ಟ್ಯಾಂಡ್ ಬಳಿ ನಡೆದಿದೆ. ಹಾಡ ಹಗಲೇ ಕೇವಲ 2160/- ರೂ ಸಲುವಾಗಿ ಇಬ್ಬರೂ ಪರಸ್ಪರ ಹರಿತವಾದ ಚಾಕುವಿನಿಂದ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ಕೊತ್ತಂಬರಿ ಆಟೋ ಸ್ಟ್ಯಾಂಡ್ ದಲ್ಲಿ ನಡೆದಿದೆ ಚಾಕು ಇರಿತಕ್ಕೆ ಒಳಗಾದ ಮಹಮ್ಮದ್ ಶಫಿ, ಖಾದರ್ ಮಹಮ್ಮದ ಶಫಿ ಮಹಮ್ಮದ ಶಫಿ ಮತ್ತು ಖಾದರ್, ಮೈನುದ್ದಿನ್ ಎಂಬ ಈ ಯುವಕರು ಹಳೇ ಹುಬ್ಬಳ್ಳಿಯಲ್ಲಿ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದರು. ಈ ವ್ಯಾಪಾರ ಸ್ಥಳಕ್ಕೆ ಇರ್ಫಾನ್ ಬೇಪಾರಿ ಎಂಬ ವ್ಯಕ್ತಿ ಆಗಾಗ ಬಂದು ಹಣ ಕೊಡು ಎಂದು ಪೀಡಿಸುತ್ತಿದ್ದ ಮತ್ತು ಹಣವನ್ನು ಪಡೆದುಕೊಂಡು ಹೋಗುತ್ತಿದ್ದ. ಅದರಂತೆ ಕಳೆದ ದಿ 28/09/2022 ರಂದು ಬೆಳಗಿನ ಸಮಯ 11 ರಿಂದ 12 ಘಂಟೆಯ ಅವಧಿಯಲ್ಲಿ ಇರ್ಫಾನ್ ಮತ್ತು ಅವನ ಆಪ್ತ ಬಿಲಾಲ್ ಎಂಬ ಯುವಕ ಇಬ್ಬರೂ ಬಂದು ಮಹಮ್ಮದ ಶಫಿ, ಖಾದರ್ ಗೆ ಹಣವನ್ನು ಕೇಳಿದ್ದಾರೆ. ಆಗ ಮಹಮ್ಮದ ಶಫಿ, ಖಾದರ್ ಇಬ್ಬರೂ ಇರ್ಫಾನ್ ಗೆ ಹಣವನ್ನು ಕೊಡಲು “ನಮ್ಮ ಬಳಿ ಹಣವಿಲ್ಲ ನಾವೇಕೆ ನಿಮಗೇ ಹಣ ಕೊಡಬೇಕು ಎಂದು ನಿರಾಕರಿಸಿದ್ದಾರೆ” ಇದನ್ನೆಲ್ಲಾ ಗಮನಿಸಿದ ಇರ್ಫಾನ್ ಮಹಮ್ಮದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತಗೆದಿದ್ದಾನೆ. ಆಗ ಮಹಮ್ಮದ್ ಮತ್ತು ಖಾದರ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಹೊಡಿಬಡಿ ಮಾಡಿಕೊಂಡಾಗ ಸಿಟ್ಟನ್ನು ನೆತ್ತಿಗೇರಿಸಿಕೊಂಡ ಇರ್ಫಾನ್ ಮಹಮ್ಮದ ಶಫಿಗೇ ಒಂದು ಗತಿ ಕಾಣಿಸಬೇಕೆಂಬ ದುರುದ್ದೇಶದಿಂದ ಘಟನೆಯಲ್ಲಿ ತನ್ನ ಬಳಿ ಇಟ್ಟುಕೊಂಡು ಬಂದಿದ್ದ ಹರಿತವಾದ ಚಾಕುವಿನಿಂದ ಮಹಮ್ಮದನ ಎಡಗಡೆ ಹೊಟ್ಟೆಯ ಮೇಲ್ಛಾಗಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ರಿಂದ 8 ಜನರೆಲ್ಲರೂ ಸೇರಿ ಎಳೆದಾಡಿಕೊಳ್ಳುವಾಗ ಇರ್ಫಾನ್ ನ ಬೆನ್ನಿನ ಭಾಗಕ್ಕೂ ಚಾಕು ಇರಿದಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಎಲ್ಲರೂ ಘಟನೆ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಇನ್ನೂ ವಿಷಯ ತಿಳಿದ ಕಸಬಾಪೇಟ್ ಪೊಲೀಸ್ ಠಾಣೆಯ ಸಿಪಿಐ ಶ್ರೀ ಎ ಎಂ ಬನ್ನಿ ರವರು ತಕ್ಷಣ ಗಂಭೀರವಾಗಿ ಗಾಯಗೊಂಡ ಮಹಮ್ಮದ ಶಫಿಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ ಶಫಿರವರ ಸಹೋದರ ಮುಜಾಫರ್ ನಿಂದ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದರು. ಹಾಗೂ ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವರದಿ : ಶಿವ ಹುಬ್ಬಳ್ಳಿ.