ಕೋಲಾರ ಜಿಲ್ಲೆಯ ಸಾರ್ವಜನಿಕರ ದಿಕ್ಕುತಪ್ಪಿಸಿ ಕೋಟ್ಯಾಂತರ ರೂ. ವಂಚನೆ ಮಾಡುತ್ತಿದ್ದ ಅನಧಿಕೃತ ಚೈನ್‌ಲಿಂಕ್ ಕಂಪನಿಗಳ ಜಾಲವನ್ನು ಬೇಧಿಸಿ ವಂಚನೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಐ.ಪಿ.ಎಸ್ ರವರ ನೇತೃತ್ವದಲ್ಲಿ ನಗರದ ಇ.ಟಿ.ಸಿ.ಎಂ ವೃತ್ತ ಹಾಗೂ ಎಂಬಿ ರಸ್ತೆ ವಿಶಾಲ್ ಮಾರ್ಟ್ ಬಳಿ ತಲೆಎತ್ತಿದ್ದ ವಂಚಕ ಕಂಪನಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ವಿವಿಧ ರೀತಿಯ ಆಮಿಷ ತೋರಿಸಿ ಯುವಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ಆರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಚಿನ್ ಘೋರ್ಪಡೆ, ಡಿ.ವೈ.ಎಸ್.ಪಿ ಮುರಳೀಧರ್, ನಗರ ಠಾಣೆ ಇನ್ಸ್ ಪೆಕ್ಟರ್ ಶ್ರೀ ಹರೀಶ್, ಸಿ.ಇ.ಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶ್ರೀ ವೀರೇಶ್ ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಎರಡೂ ನಕಲಿ ವಂಚಕ ಕಂಪನಿಗಳ ವಿರುದ್ದ ಬಡ್ಸ್ ಕಾಯ್ದೆ 2019 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ಅತಿಯಾಸೆಗೆ ಒಳಗಾಗದೇ ಇಂತಹ ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಬಾರದು ಹಾಗೂ ಇಂತಹ ಜಾಲಗಳ ಬಗ್ಗೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಸಂದೇಶ ನೀಡಿರುತ್ತಾರೆ.
ದಿನಾಂಕ 12/09/2022 ರಂದು ಕೋಲಾರ ನಗರ ಪೊಲೀಸ್ ಠಾಣೆಗೆ ವರದಿಯಾದ ಲಿಖಿತ ದೂರಿನಂತೆ ಕೋಲಾರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚೌಡೇಶ್ವರಿ ನಗರದಲ್ಲಿ “ಖುಷಿ ಸಂಪದ” ಎಂಬ ಹೆಸರಿನ ಸಂಸ್ಥೆಯೊಂದು ಸಾರ್ವಜನಿಕರಿಂದ ಅನಧಿಕೃತವಾಗಿ ಠೇವಣಿಗಳನ್ನು ಸ್ವೀಕರಿಸಿ ಅತಿಯಾದ ಹಾಗೂ ಆಕರ್ಷಕ ಕಮಿಷನ್ ಉಡುಗೊರೆ ಇತ್ಯಾದಿಗಳನ್ನು ಕೊಡುವುದಾಗಿ ನಂಬಿಸಿ ಯಾವುದೇ ನಿಯಂತ್ರಿತ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೋಟ್ಯಾಂತರ ರೂಪಾಯಿಗಳನ್ನು ಸಾರ್ವಜನಿಕ ಹಣ ಠೇವಣಿಯನ್ನಾಗಿ ಪಡೆದುಕೊಳ್ಳುತ್ತಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಗೆ ವರದಿಯಾದ ದೂರಿನ ಮೇರೆಗೆ ಬಡ್ಸ್ ಕಾಯ್ದೆ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹಾಗೆಯೇ ಇದೇ ದಿನ ಕೋಲಾರ ಸಿ.ಇ.ಎನ್ ಸೈಬರ್ ಪೊಲೀಸ್ ಠಾಣೆಗೆ ವರದಿಯಾದ ಲಿಖಿತ ದೂರಿನಂತೆ ನಗರದ ಮಹಾಲಕ್ಷ್ಮಿ ಲೇಔಟ್ ಹಾಗೂ ಇ ಟಿ ಸಿ ಎಂ ಆಸ್ಪತ್ರೆ ಸರ್ಕಲ್ ನಲ್ಲಿ ಮಾಡ್ರನ್ ಸ್ಕೂಲ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಸಂಸ್ಥೆ ಎಂಬ ಬಿಸಿನೆಸ್ ಟ್ರೈನಿಂಗ್ ಸೆಂಟರ್ ಗಳನ್ನು ತೆರೆದು ಸಾರ್ವಜನಿಕರಿಂದ ಅನಧಿಕೃತವಾಗಿ ಠೇವಣಿಗಳನ್ನು ಸ್ವೀಕರಿಸಿ ಅತಿಯಾದ ಹಾಗೂ ಆಕರ್ಷಕ ಕಮಿಷನ್ ಉಡುಗೊರೆ ಇತ್ಯಾದಿಗಳನ್ನು ಕೊಡುವುದಾಗಿ ನಂಬಿಸಿ ಯಾವುದೇ ನಿಯಂತ್ರಿಕ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣವನ್ನು ಠೇವಣಿಯನ್ನಾಗಿ ಪಡೆದುಕೊಳ್ಳುತ್ತಿರುವ ಬಗ್ಗೆ ಕೋಲಾರದ ಸೈಬರ್ ಪೊಲೀಸ್ ಠಾಣೆಗೆ ವರದಿಯಾದ ದೂರಿನ ಮೇರೆಗೆ ಬಡ್ಸ್ ಕಾಯ್ದೆ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎರಡು ಪ್ರಕರಣಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಐಪಿಎಸ್ ಹಾಗೂ ಅಪಾರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಚಿನ್ ಪಿ. ಘೋರ್ಪಡೆ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರಳಿದರ ಕೋಲಾರ ನಗರ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಯ ತಂಡವು “ಖುಷಿ ಸಂಪದ” ಸಂಸ್ಥೆಯ ಮೇಲೆ ದಾಳಿ ನಡೆಸಿ ಕಚೇರಿಯಲ್ಲಿನ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿಕೊಂಡಿರುತ್ತಾರೆ. ಹಾಗೂ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಬಿ. ಒಡೆಯರ್, ಮಧು ಕಿರಣ್, ಶ್ರೀಮತಿ ವರಲಕ್ಷ್ಮಿ ರವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಹಾಗೆಯೇ ಈ ಸಂಸ್ಥೆಯ ಕಚೇರಿ ಮತ್ತು ಪ್ರಮುಖ ದಾಖಲಾತಿಗಳನ್ನು ಹಾಗೂ ಠೇವಣಿ ದಾರರಿಗೆ ಅಕ್ರಮವಾಗಿ ಹಂಚಲು ಶೇಖರಿಸಿಟ್ಟಿದ್ದ ಸುಮಾರು 500 ಆಹಾರ ಕಿಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಸೈಬರ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವೀರೇಶ್ ಕೋಲಾರ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಗಲ್ಪೇಟ್ ವೃತ್ತ ನಿರೀಕ್ಷಕರಾದ ವೆಂಕಟರಾಮಪ್ಪ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬೈರ ಹಾಗೂ ಪಿ.ಎಸ್.ಐ ಗಳಾದ ಅಣ್ಣಯ್ಯ ಮತ್ತು ಅರುಣ್ ಪಾಟೀಲ್ ಹಾಗೂ ಸಿಬ್ಬಂದಿಯ ತಂಡವು ಮಾಡ್ರನ್ ಸ್ಕೂಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ ಎರಡು ಬಿಸಿನೆಸ್ ಟ್ರೈನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡು ಮತ್ತು ಆರೋಪಿತರಾದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಠಾಕೂರ್, ಗಂಗರಾಜು, ಕೃಷ್ಣ, ಮಾರುತಿ ಮತ್ತು ಶ್ರೀಮತಿ ಜ್ಯೋತಿ ನರವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದಾಳಿಯ ವೇಳೆ ಗ್ರಾಹಕರಿಗೆ ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ಉಡುಪುಗಳನ್ನು, ತರಬೇತಿಗೆ ಬಳಸಿದ ಪೀಠೋಪಕರಣಗಳನ್ನು, ಕಂಪ್ಯೂಟರ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿ – ರೋಶನ್
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…