ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತಿನಂತೆ ನಮ್ಮ ಕಾಡು ಹಾಗೂ ಗಿಡ ಮರಗಳನ್ನು ಉಳಿಸಬೇಕು. ನಾಡಿಗೆ ಮತ್ತು ನಮಗೆ ಗಿಡ ಮರಗಳು ಅತ್ಯವಶ್ಯಕವಾಗಿರುತ್ತದೆ. ಅದೇ ರೀತಿ ನಮ್ಮ ನಿಮ್ಮೆಲ್ಲರ ಬಳಿ ಇರುವ ಅರಣ್ಯ ಸಂಪತ್ತನ್ನು ಕಾಪಾಡಿ ಕೊಳ್ಳಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ .ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಅರಣ್ಯ ಸಂಪತ್ತು ಇದೆ . ಇದನ್ನು ರಕ್ಷಿಸಬೇಕಾದ ಸ್ಥಳೀಯರು ಅದನ್ನು ನಾಶ ಪಡಿಸಬಾರದು . ಹಾಗೂ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಡಂಬಿ ಹಳ್ಳದಮನೆ ಎಂಬ ಅರಣ್ಯ ಸಂಪತ್ತಿನಲ್ಲಿ ಮರಗಳನ್ನೂ
ಕಡಿದು ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ವದಂತಿ ಇತ್ತು. ಈ ವದಂತಿ ಗಮನಿಸಿದ ಉತ್ತರಕನ್ನಡ ಜಿಲ್ಲಾ ಅರಣ್ಯ ವಿಭಾಗದ ಅಧಿಕಾರಿಗಳು. ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಬೇಕು ಹಾಗೂ ನಮ್ಮ ಅರಣ್ಯ ಸಂಪತ್ತನ್ನು ನಾವೇಲ್ಲರು ರಕ್ಷಿಸಿಕೊಳ್ಳಬೇಕೆಂದು ಹರಸಾಹಸ ಪಡುತ್ತಿದ್ದರು ಇದೇ ಮಾತಿನಂತೆ ದಿ: 30/9/2022 ರಂದು ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ತಂಡದವರ ಜೊತೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಅರಣ್ಯದಲ್ಲಿನ ಮರಗಳನ್ನು ಅಕ್ರಮವಾಗಿ ಕದ್ದು ಪರ್ನಿಚರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಸಾಗವಾನಿ ಮರಗಳ ಕಳ್ಳ ಕೃಷ್ಣ ಹನುಮಂತಪ್ಪ ದೇವರಗುಡ್ಡ ಎಂಬ ವ್ಯಕ್ತಿ ಅರಣ್ಯದಲ್ಲಿ ಹಾಜರಿದ್ದು ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದನ್ನು ನೋಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಈತನು ಕೆಲವು ದಿನಗಳಿಂದ ಅಕ್ರಮವಾಗಿ ಅರಣ್ಯದಲ್ಲಿನ ಸಾಗವಾನಿ ಮರಗಳನ್ನು ಕದ್ದು ಫರ್ನೀಚರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಇವೆಲ್ಲವನ್ನೂ ಗಮನಿಸಿದ ಜಿಲ್ಲಾ ಅರಣ್ಯ ಅಧಿಕಾರಿ ಎಸ್ ಜಿ ಹೆಗಡೆ ರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಮತ್ತು ಅರಣ್ಯ ರಕ್ಷಕರು (ಸಿಬ್ಬಂದಿಗಳು) ಮರಗಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.

ವರದಿ: ಶ್ರೀಪಾದ್ ಹೆಗಡೆ

error: Content is protected !!