ನವಲಗುಂದ ಪಟ್ಟಣದ ಮತ್ತು ಚೆನ್ನಮ್ಮನ ಕೆರೆಯ ಮಧ್ಯೆದ ಅಣ್ಣಿಗೇರಿ ಮಾರ್ಗದಲ್ಲಿ ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆದಲ್ಲಿ ಭೀಕರ ಅಪಘಾತ ಸಂಭವಸಿದ್ದು ಅದೃಷ್ಟಾವತ ಯಾವುದೇ ಪ್ರಾಣಹಾನಿ ಆಗಿಲ್ಲ ನವಲಗುಂದ ಪಟ್ಟಣದಿಂದ ಅಣ್ಣಿಗೇರಿ ಮಾರ್ಗದಲ್ಲಿ ಹೊರಟಿದ್ದ ಕೆಎಸ್ಆರ್ ಟಿಸಿ ಸಾರಿಗೆ ಸಂಸ್ಥೆಯ ಬಸ್ಸಿನ ಮುಂಭಾಗದ ಎಕ್ಸೆಲ್ ಕಟ್ ಆದ ಪರಿಣಾಮದಿಂದ ಚಾಲಕನಿಗೆ ನಿಯಂತ್ರಣ ತಪ್ಪಿ ಬಸ್ ನ ಮುಂಭಾಗದಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ ಈ ಘಟನೆಯಲ್ಲಿ ಟ್ರಾಕ್ಟರ್ ನ ಹಿಂಬದಿಯಲ್ಲಿ (ಕೃಷಿ ಉಪಕರಣ) ಕುಂಟೆಯ ಮೇಲೆ ಕುಳಿತಿದ್ದ 32 ವರ್ಷದ ಫಕ್ಕಿರೇಶ್ ಭೋಸಲೆ ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದೆ ಕೂಡಲೇ ಸ್ಥಳೀಯ ದಾರಿ ಹೋಕರು ಫಕ್ಕಿರೇಶ್ ನನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದರು ಅಲ್ಲಿ ಫಕ್ಕಿರೇಶನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದರಿಂದ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ ಇನ್ನೂ ಈ ದುರ್ಘನೆಯಲ್ಲಿ ಕೆಎಸ್ಆರ್ ಟಿಸಿ ಸಾರಿಗೆ ಸಂಸ್ಥೆಯ ಬಸ್ ದಲ್ಲಿ ಸುಮಾರು 28 ರಿಂದ 30 ಜನರು ಪ್ರಯಾಣಿಸುತ್ತಿದ್ದು ಕೆಲವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಯಾವ ಪ್ರಯಾಣಿಕರ ಪ್ರಾಣ ಹಾನಿಯೂ ಆಗಿಲ್ಲ ಎಂದು ಹೇಳಲಾಗುತ್ತಿದೆ ಅಷ್ಟೇ ಅಲ್ಲದೆ ಈ ದುರ್ಘನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ: ಶಿವು ಹುಬ್ಬಳ್ಳಿ .