ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಕ್ರಾಸ್ ಬಳಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಕಾರಿನಲ್ಲಿಂದ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮುದ್ದೇಬಿಹಾಳದಿಂದ ಇಳಕಲ್ ಕಡೆ ಹೋಗುತ್ತಿದ್ದಂತಹ ಕಾರು ಇಳಕಲ್ ನಿಂದ ಮುದ್ದೇಬಿಹಾಳ ಕಡೆ ಬರುತ್ತಿದ್ದಂತಹ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೊದಲ ಹಾಜಿ ಸಾಬ್ ಭಗವಾನ್ ಮತ್ತು ಪರಶುರಾಮ ಕಟ್ಟಿ ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತೋರ್ವ ರಾಜು ಚೌಹಾಣ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣವನ್ನು ಹುನುಗುಂದ ಪೊಲೀಸರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.