Latest

ಕೆ.ಎಸ್.ಆರ್.ಟಿ.ಸಿ ಬಸ್ ಮರಕ್ಕೆ ಡಿಕ್ಕಿ – 20ಕ್ಕೂ ಹೆಚ್ಚು ಮಂದಿಗೆ ಗಾಯ

ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳ್ ಹೋಬಳಿ, ಕುಂದನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ.

ಅಲೇನಹಳ್ಳಿ ಗ್ರಾಮದಿಂದ ಕೆ.ಆರ್. ಪೇಟೆ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಗಾಯಗೊಂಡಿದ್ದಾರೆ.

ಇವರಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲ ಮಕ್ಕಳಿಗೆ ಕೈ-ಕಾಲು ಮುರಿದಿದೆ. ಗಾಯಾಳುಗಳನ್ನು ತಕ್ಷಣವೇ ಕೆ.ಆರ್. ಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆ ಕುರಿತಂತೆ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಎಲ್.ಎನ್. ಮೂರ್ತಿ, ಕೆ.ಆರ್. ಪೇಟೆ.

nazeer ahamad

Recent Posts

ಕೋಟಿ ಕಾರಿನ ಆರೋಪಿಗಳ ಮೇಲೆ ಫೈರಿಂಗ್

ಉತ್ತರ ಕನ್ನಡ:-ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.…

7 hours ago

ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ: ಜಿಪಂ ಸಿಇಒ

ಕಾರವಾರ: ಪ್ರಸ್ತುತ ಬೇಸಿಗೆಗಾಲವಾದ್ದರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೀರಿನ ಅಭಾವ…

7 hours ago

ಅನಧಿಕೃತ ಕ್ಲಿನಿಕ್ ಗಳ ಮೇಲೆ ಮುಂದುವರೆದ ದಾಳಿ.

ಮುಂಡಗೋಡ:- ದಿನಾಂಕ 03-04-2025ರಂದು ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ…

7 hours ago

ಫರಿದಾಬಾದ್‌ನಲ್ಲಿ ಟ್ರಾವೆಲ್ ಬ್ಯಾಗ್‌ನಲ್ಲಿ ತಲೆಯಿಲ್ಲದ ಮಹಿಳೆಯ ಶವ ಪತ್ತೆ

ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಒಂದು ಭೀಕರ ಘಟನೆಯು ಬೆಳಕಿಗೆ ಬಂದಿದೆ. ಬುಧವಾರ, ಫರಿದಾಬಾದ್‌ನ ಆಗ್ರಾ ಕಾಲುವೆಯ ಬಳಿ ಪಲ್ಟನ್ ಪಲ್ಲಾ…

8 hours ago

ದಾವಣಗೆರೆಯಲ್ಲಿ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ ಮಹಿಳಾ ಗುಂಪು

ದಾವಣಗೆರೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಐವರ ತಂಡ ಕಾರ್ಯನಿರತ ಜ್ಯುವೆಲರಿ ಅಂಗಡಿಯಲ್ಲಿ ಕೆಲಸಗಾರರ ಗಮನ ಬೇರೆಡೆ ಸೆಳೆದು 1.13 ಕೋಟಿ ರೂ.…

8 hours ago

ಕರ್ತವ್ಯ ಲೋಪ ಮತ್ತು ಅಕ್ರಮ ವರ್ಗಾವಣೆ ಆರೋಪ: ಬೆಂಗಳೂರಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕಿಯರು ಅಮಾನತು

ಬೆಂಗಳೂರು: ನಗರದ ಕೆಜಿಎಸ್ ನಂ.2 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಹಾಗೂ ಇಬ್ಬರು ಸಹಶಿಕ್ಷಕಿಯರನ್ನು ಕರ್ತವ್ಯದಲ್ಲಿ ನಿರ್ಲಕ್ಷ್ಯ…

10 hours ago