Latest

ಟ್ರಾಕ್ಟರ್ ಟ್ರೇಲರ್ ಕಳ್ಳರನ್ನು ಬಂದಿಸಿ, 6 ಟ್ರೇಲರ್ ವಶಪಡಿಸಿಕೊಳ್ಳವಲ್ಲಿ ಕುಂದಗೋಳ ಪೋಲಿಸರು ಯಶಸ್ವಿ.

ಕುಂದಗೋಳ: ಕುಂದಗೋಳ ತಾಲೂಕಿನ ವಿವಿಧೆಡೆ ಕಳ್ಳತನ ಮಾಡಿದ್ದ ಟ್ರಾಕ್ಟರ್ ಟ್ರೇಲರ್ ಕಳ್ಳರನ್ನು ಬಂದಿಸಿ 13.46 ಲಕ್ಷರೂ ಬೆಲೆ ಬಾಳುವ 6 ಟ್ರೇಲರ್ ವಶಪಡಿಸಿಕೊಳ್ಳವಲ್ಲಿ ಕುಂದಗೋಳ ಪೋಲಿಸರು ಯಶಸ್ವಿಯಾಗಿದ್ದಾರೆ.
ರೈತಾಪಿ ವರ್ಗದವರೂ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲ್ಪಡುವ ಟ್ರಾಕ್ಟರ್ ಟ್ರೇಲರ್ ಗಳನ್ನು ಕದೀಮರು ಕಳ್ಳತನಕ್ಕೆ ಮುಂದಾಗಿದ ಆರೋಪಿಗಳನ್ನು ಹೆಡೆಮುರಿ ಕಟ್ಟವುಲ್ಲಿ ಪೋಲೀಸರು ಸಕ್ಸಸ್. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಧಾರವಾಡ ಎಸ್ ಪಿ ಡಾ ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎನ್. ಬಿ. ಭರಮನಿ ಪೋಲಿಸ್ ಉಪಾಧೀಕ್ಷಕ ಶಿವಾನಂದ ಕಟಗಿ, ಅವರ ಮಾರ್ಗದರ್ಶನದಲ್ಲಿ ಕುಂದಗೋಳ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಾನಂದ ಅಂಬಿಗೇರ ನೇತ್ರತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಇಂದು ಏ 12 ರಂದು ಬೆಳಿಗ್ಗೆ 2:30 ರ ಸುಮಾರಿಗೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಆರೋಪಿಗಳು ಟ್ರಾಕ್ಟರ್ ಟ್ರೇಲರ್ ಕಳ್ಳತನ ಮಾಡಿರುವುದು ತಪ್ಪೂಪಿಕೊಂಡಿದ್ದಾರೆ
ಕುಂದಗೋಳ ಪಟ್ಟಣ, ಬೆನಕನಹಳ್ಳಿ, ಶಿರೂರ, ಇನಾಮಕೊಪ್ಪ ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹಾಗೂ ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ, ಮಲ್ಲಾಪುರ ಟ್ರೇಲರ್ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಸದರಿ ಆರೋಪಿಗಳಿಂದ ಒಟ್ಟು 13.40 ಲಕ್ಷ ರೂ ಮೌಲ್ಯದ 6 ಟ್ರೇಲರ್ ಹಾಗೂ 1 ನೀರಿನ ಟ್ಯಾಂಕರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 2 ಟ್ರಾಕ್ಟರ್ ಇಂಜಿನ್ ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನಿಖಾ ತಂಡದಲ್ಲಿ ಪಿಎಸ್ಐ ಆರ್.ಸಿ.ದೊಡ್ಡಮನಿ, ಮಂಜುಳಾ ಸದಾರಿಯವರ, ಇಮ್ರಾನ್ ಪಠಾಣ ಹಾಗೂ ಸಿಬ್ಬಂದಿಗಳಾದ ಚಂದ್ರು ಬಡಿಗೇರ, ಬಸವರಾಜ ಶಿರಕೋಳ, ಮಡಿವಾಳ ಜೋಡಗೇರಿ, ಪರಮೇಶಿ ಗೊಂದಿ, ಶಂಕರ ಮುತ್ತಲಗೇರಿ, ಮಲಗೌಡ ಪಾಟೀಲ್, ಮೌನೇಶ ಗಲಗ, ಮಣಿಚಂದ್ರ ಗೋಣಿನವರ, ಅರುಣ ಹಾವಾಡಿ, ಉದಯ ಕಮ್ಮಾರ, ತಾಂತ್ರಿಕ ಸಿಬ್ಬಂದಿ ಆರೀಫ್ ಗೋಲಂದಾಜ, ವಿಠ್ಠಲ ಡಂಗನವರ ಇದ್ದಾರೆ. ಇವರ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿದ್ದಾರೆ.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago