ಕುಂದಗೋಳ; ತಾಲೂಕಿನ ಯರಗುಪ್ಪಿ ಯಿಂದ ಅಣ್ಣಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬಿಜೆಪಿ ಕಾರ್ಯಾಕಾರಿಣಿ ಸದಸ್ಯ ಎಂ ಆರ್ ಪಾಟೀಲ ಹಾಗೂ ಇತರರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ರವಿ ಕುಂಬಾರ, ಎಂ ಆರ್ ಪಾಟೀಲ ಅವರೇ ಈ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಅನುದಾನ ದೊರಕಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು ಸತತ ಒತ್ತಡ ಹಾಕಿದ್ದರಿಂದ 1 ಕೋಟಿ ಅನುದಾನ ರಸ್ತೆ ಅಭಿವೃದ್ದಿಗೆ ಲಭಿಸಿ ಕಾಮಗಾರಿ ಆರಂಭವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ರೇಣುಕಾ ಪ ದುಂಡಿ, ಸದಸ್ಯರಾದ ಸಿ. ಬಿ ಮಡಿವಾಳರ, ಬಿ ವಾಯ್ ಮಾಯಣ್ಣನವರ, ಮತ್ತು ಮಹದೇವಪ್ಪ ಅಣ್ಣಿಗೇರಿ, ಪಕ್ಕಿರೇಶ ದುಂಡಿ, ಭೀಮನಗೌಡ ಪಾಟೀಲ, ರಾಮಪ್ಪ ಕೊಟಗಾರ, ಹನುಮಂತಗೌಡ ಉಮ್ಮನಗೌಡ ಸೇರಿದಂತೆ ಅನೇಕರಿದ್ದರು.
ವರದಿ;ಶಾನು ಯಲಿಗಾರ