ಕುಂದಗೋಳ: ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೆ ಬದುಕುಬಹುದು ಆದರೆ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ನೀರಿಲ್ಲದೆ ಮನುಷ್ಯ ಒಂದು ದಿನ ಸಹ ಇರಲಾರ. ಹೀಗಾಗಿ ನೀರು ಅತಿಅವಶ್ಯಕ.

ಅದರಂತೆ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜಾರಿಗೆ ತಂದ ಯೋಜನೆ ಮಳೆ ನೀರು ಕೊಯ್ಲು ಒಂದು. ಎಲ್ಲೆಡೆ ನೀರಿನ ಕೊರತೆ ಕಾಣಿಸಿಕೊಳ್ಳಬಾರದು ಅಂತ ಸರಕಾರಗಳು ಸಹ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ.

ಏನು ಇದು ಮಳೆ ನೀರು ಕೊಯ್ಲು? ಮಳೆಗಾಲದಲ್ಲಿ ಮನೆಯ ಮೇಲ್ಚಾವಣಿ ಮೇಲೆ ಬಿಳ್ಳುವ ನೀರನ್ನು ಪೈಪ್ ಲೈನ್ ಮುಖಾಂತರ ಹಿಡಿದಿಟ್ಟುಕೊಳ್ಳುವುದು. ಜೊತೆಗೆ ಆ ನೀರನ್ನು ನೀರಿನ ಸಂಪಿನ ಒಳಗೆ ಹೋಗಲು ಪೈಪ್ ಲೈನ್ ಅಳವಡಿಸಿ ಸಂಗ್ರಹ ಮಾಡಿ ಬಳಿಕೆಗೆ ಉಪಯೋಗಿಸಿಲು ಇದು ಸಹಕಾರಿಯಾಗಿದೆ. ಹೀಗೆ ಮಾಡುವುದರಿಂದ ದಿನ ಬಳಿಕೆಗೆ ನೀರು ಉಪಯೋಗಿಕಾರಿಯಾಗುತ್ತದೆ

ಹಾಗಾಗಿ ಸರಕಾರದ ಯೋಜನೆಗಳು ಪಾರದರ್ಶಕತೆ ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯೋಜನೆ ಸದ್ಬಳಕೆ ಆಗಲಿ ಅಂತ ಈ ಮಹಾತ್ಮ ಗಾಂಧಿ ಉದ್ಯೋಗ ಖಾತ್ರೆಯಲ್ಲಿ ಯೋಜನೆಯಡಿ ರೂಪಿಸಲಾಗಿದೆ.

ಕುಂದಗೋಳ ತಾಲೂಕಿನ ಕಳಸ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರದ ಹಿಂಬಾಗದಲ್ಲಿ ನಿರ್ಮಿಸಿಲಾಗಿದ ಮಳೆ ನೀರು ಕೊಯ್ಲು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡದೆ ಕೈ ತೊಳೆದುಕೊಂಡಿದ್ದಾರಾ ಅಧಿಕಾರಿಗಳು? ಚಿಕ್ಕ ಸಂಪು ನಿರ್ಮಾಣ ಮಾಡಿ ಪೈಪ್ ಲೈನ್ ಸಹ ಕನೆಕ್ಷನ್ ಮಾಡದೇ, ಸರಕಾರಿ ಜಾಹೀರಾತು ಹಾಕಿ ನಿರ್ಮಾಣ ಮಾಡಿದವೆ ಅಂತ ಹಣೆಪಟ್ಟಿ ಹಾಕುವುದು ಅಲ್ಲ. ಇದನ್ನು ಅನುಷ್ಠಾನಕ್ಕೆ ತರಬೇಕು.

ಒಂದು ಚಿಕ್ಕ ಕಟ್ಟಿ ತರಹ ನಿರ್ಮಿಸಿ ಸರಿಯಾಗಿ ಪೈಪ್ ಲೈನ್ ಅಳವಡಿಸದೆ, ಅಂದಾಜು ಮೊತ್ತ 1,50,000 ರೂಪಾಯಿ ಖರ್ಚು ಭರಸಲಾಗಿದೆ. ಹಾಗಾದರೆ ಹಣ ಕೂಳ್ಳೆ ಹೊಡಿದಾರ ಅನ್ನುವುದು ಮೇಲ್ನೋಟಕ್ಕೆ ಕಂಡು ಬರ್ತಾ ಇದೆ.

ಒಟ್ಟಾರೆ ಕಾಮಗಾರಿಗಳು ಸಾರ್ವಜನಿಕ ಉಪಯೋಗಿಕಾರಿಯಾಗಿಲಿ ಅನ್ನುವುದು ನಮ್ಮ ಪತ್ರಿಕೆ ಕಳಕಳಿ

ವರದಿ: ಶಾನು ಯಲಿಗಾರ

error: Content is protected !!