ಉಡುಪಿ ಜಿಲ್ಲೆಯಲ್ಲಿ ಮೂಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಅವರ ಸಹೋದ್ಯೋಗಿ ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಮಾ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ, ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಇಬ್ಬರು ಆರೋಪಿಗಳು ಕಾಳಿಕಾಂಬಾ ದೇವಾಲಯದ ಅರ್ಚಕರಿಗೆ ಮಾಹಿತಿ ನೀಡದೆ ಕುರಿಗಳನ್ನು ಬಲಿ ನೀಡಿ, ವಾಮಾಚಾರ ನಡೆಸಿದ್ದರೆಂದು ತಿಳಿದುಬಂದಿದೆ.
ಆರೋಪದಲ್ಲಿ ಪೊಲೀಸ್ ಅಧಿಕಾರಿ ಹೆಸರು
ಈ ಪ್ರಕರಣದಲ್ಲಿ ಉಡುಪಿಯ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಸುಮಾ ಹೆಸರು ಪ್ರಸ್ತಾಪವಾಗಿದ್ದು, ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ್ ಅವರ ಪತ್ನಿಯಾದ ಸುಮಾ, ಈ ವಾಮಾಚಾರದಲ್ಲಿ ನಂಟಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಖುದ್ದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.
ಸುಮಾ ತಲೆಮರೆಸಿಕೆ, ಪೊಲೀಸರು ನೋಟಿಸ್ ಜಾರಿ
ವಾಮಾಚಾರ ಪ್ರಕರಣದಲ್ಲಿ ತಮ್ಮ ಹೆಸರು ಮುಂದುವರಿದಂತೆ ಕೇಳಿಬರುತ್ತಿದ್ದಂತೆ, ಪೊಲೀಸ್ ಅಧಿಕಾರಿ ಸುಮಾ ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಮಂಗಳೂರು ಪೊಲೀಸರು ನೋಟಿಸ್ ಕಳುಹಿಸಿರುವುದಾದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ತದನಂತರ, ಪ್ರಸಾದ್ ಅತ್ತಾವರ್ ಅವರ ಮೊಬೈಲ್ ಫೋನ್‌ನಲ್ಲಿ ಸಿಕ್ಕಿರುವ ವಾಮಾಚಾರದ ಫೋಟೋಗಳಲ್ಲಿ ಮತ್ತು ಚೀಟಿಗಳಲ್ಲೂ ಸುಮಾ ಹೆಸರು ಉಲ್ಲೇಖಿಸಲಾಗಿದೆ. ವಾಮಾಚಾರದ ವೇಳೆ ಹೆಸರುಗಳಿರುವ ಪಟ್ಟಿ ಪೋಲೀಸರ ತನಿಖೆಗೆ ಸಿಕ್ಕಿದ್ದು, ಅದರಲ್ಲಿ ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಮತ್ತು ಸುಮಾ ಅವರ ಹೆಸರುಗಳೂ ಇದ್ದವೆಂದು ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದ್ದು, ತಲೆಮರೆಸಿಕೊಂಡಿರುವ ಪೊಲೀಸ್ ಅಧಿಕಾರಿಯನ್ನು ಶೀಘ್ರದಲ್ಲೇ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಖಾಸಗಿ ಮಹಿಳಾ ಹಾಸ್ಟೆಲ್ನಲ್ಲಿರುವ ರಹಸ್ಯ ಕ್ಯಾಮೆರಾ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್…
ಕೊಪ್ಪಳದ ಗಂಗಾವತಿ ಬಳಿ ನಡೆದ ವಿದೇಶಿ ಮಹಿಳೆ ಹಾಗೂ ಹೋಮ್‌ಸ್ಟೇ ಮಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ…
ಅರಸೀಕೆರೆ ರೈಲ್ವೆ ಪೊಲೀಸರು ತೀವ್ರ ತನಿಖೆ ನಡೆಸಿ, ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ…
ಖಾಸಗಿ ಆಸ್ಪತ್ರೆಯ ದುಬಾರಿ ಬಿಲ್ ನೋಡಿ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು…
ಬೆಂಗಳೂರು ನೆಲಗದರನಹಳ್ಳಿಯಲ್ಲಿ ಪತಿ ಪತ್ನಿಯ ಸೌಂದರ್ಯ ಕುರಿತು ಟೀಕಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪತಿ ಪುಲಿ…
ಹ್ಯೂಸ್ಟನ್‌ನಿಂದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 733ನಲ್ಲಿ ನಡೆದ ಅಹಿತಕರ ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕ ಅನುಭವಿಸಿದರು.…