ನೆಲಮಂಗಲ: ನೆಲಮಂಗಲದಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೆಸರುಘಟ್ಟದ ತೋಟಗಾರಿಕೆಯಲ್ಲಿ ಚಿರತೆ ಕಾಣಿಸಿಕೊಂಡು, ಐವರಕಂಡವಪುರದ ತೋಟಗಾರಿಕೆ ಪ್ರದೇಶದಲ್ಲಿ ಪ್ರತ್ಯೇಕ ದಾಳಿ ನಡೆಸಿದೆ.
ಕೆಲವು ದಿನಗಳ ಹಿಂದೆ ಹಸುವಿನ ಮೇಲೆ ದಾಳಿ ಮಾಡಿದ ಚಿರತೆ ಇದೀಗ ಮತ್ತೊಮ್ಮೆ ದಾಳಿ ಮಾಡಿ ಜನರನ್ನು ಭಯಪಡಿಸುವಂತೆ ಮಾಡಿದೆ. ಐವರಕಂಡವಪುರ ಹಾಗೂ ಹೆಸರುಘಟ್ಟದ ಪಕ್ಕದ ಪ್ರದೇಶಗಳಲ್ಲಿ ಚಿರತೆ ದಾಳಿಯ ಭಯದಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿ ಪ್ರದೇಶದಿಂದ ಹೂರ್ನಗರದತ್ತ ಚಿರತೆ ಪ್ರವೇಶ ಮಾಡುತ್ತಿದ್ದು, ನಗರಕ್ಕೆ ತಲುಪಿದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂದು ಸ್ಥಳೀಯರು ಚಿಂತೆ ವ್ಯಕ್ತಪಡಿಸಿದ್ದಾರೆ.

error: Content is protected !!