ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಮಳೆ ಬರುವಾಗ ಸಿಡಿಲು ಬಡಿದು ಅಂಬಳಿ ಪ್ರಕಾಶಪ್ಪ ತಂದೆ ಅಂಬಳಿ ಗೋಣೆಪ್ಪ ಇವರಿಗೆ ಸೇರಿದ 3 ಆಕಳು ಮೇಯಲು ಕಟ್ಟಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿವೆ.
ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬಕ್ಕೆ ಈಗ ಬರ ಸಿಡಿಲು ಬಡಿದಂತಾಗಿದೆ. ಸ್ಥಳಕ್ಕೆ ಪರಿಶೀಲನೆ ನಡೆಸಿದ ಅಧಿಕಾರಿಗಳ ಮುಂದೆ ಕಣ್ಣೀರಿಡುತ್ತಾ ಪರಿಹಾರ ದೊರಕಿಸಿ ಕೊಡುವಂತೆ ಅಂಗಲಾಚಿದರು.
ವರದಿ:- ಮಣಿಕಂಠ. ಬಿ