ಬಳ್ಳಾರಿ: ಭ್ರಷ್ಟ ಅಧಿಕಾರಿಗಳ ವಿರುದ್ಧದ ಸಮರ ಘೋಷಿಸಿದ ಲೋಕಾಯುಕ್ತ ಅಧಿಕಾರಿಗಳು ಬುಧವಾರ (ಜನವರಿ 8) ರಾಜ್ಯಾದ್ಯಾಂತ ಏಕಕಾಲದಲ್ಲಿ ದಾಳಿ ನಡೆಸಿದರು.
ಬಳ್ಳಾರಿಯ ಬಿಸಿಎಂ ತಾಲೂಕು ಅಧಿಕಾರಿಯು ಲೋಕೇಶ್‌ನ ಮನೆಯ ಮೇಲೆ ಸಹ ದಾಳಿ ನಡೆದಿದ್ದು, ರಾಮಾಂಜನೇಯ ನಗರದಲ್ಲಿ ಅವನ ಮನೆ ಮತ್ತು ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಯಿತು.
ಪರಿಶೀಲನೆಯ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆ, ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದ್ದು, ಅಧಿಕಾರಿಗಳು ಇನ್ನೂ ಹೆಚ್ಚಿನ ದಾಖಲೆಗಳನ್ನು ಹುಡುಕುತ್ತಿದ್ದಾರೆ.
ಲೋಕೇಶ್ ವಿರುದ್ಧ ವರ್ಗಾವಣೆಗಳನ್ನು ಮಾಡುವುದನ್ನು ಕಾಯಕವಾಗಿ ಸ್ವೀಕರಿಸಿದ್ದ ಎಂಬ ಆರೋಪಗಳು ಕೇಳಿಬರುತ್ತಿವೆ.