ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಲಂಚ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಗೇಪಲ್ಲಿ ತಾಲೂಕಿನಲ್ಲಿ ಸೇವೆ ನಿರ್ವಹಿಸುತ್ತಿದ್ದ ಕೃಷಿ ಅಧಿಕಾರಿ ಶಂಕರಯ್ಯ, ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನೊಬ್ಬನಿಂದ ಲಕ್ಷಾಂತರ ರೂ. ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಶಂಕರಯ್ಯನನ್ನು ವಶಕ್ಕೆ ಪಡೆದಿದ್ದಾರೆ.
ಶಂಕಿತ ಅಧಿಕಾರಿ ಶಂಕರಯ್ಯ, ಗುತ್ತಿಗೆದಾರ ಮಂಜುನಾಥ್ ಬಳಿ ರೂ. 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಆರೋಪ ಕೇಳಿ ಬಂದಿದೆ. ಇದೇ ಹಿನ್ನೆಲೆಯಲ್ಲಿ, ಮೊದಲನೇ ಹಂತದಲ್ಲಿ ರೂ. 1 ಲಕ್ಷ ಮೊತ್ತವನ್ನು ಮುಂಗಡವಾಗಿ ಸ್ವೀಕರಿಸಿದ್ದ ಶಂಕರಯ್ಯ, ಬಳಿಕ ಉಳಿದ ರೂ. 2 ಲಕ್ಷ ಪಡೆಯುವ ವೇಳೆಯಲ್ಲಿ ಲೋಕಾಯುಕ್ತದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಚಿಕ್ಕಬಳ್ಳಾಪುರ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಾಳಿ ನಡೆದಿದೆ. ಶಂಕರಯ್ಯನ ಹಸ್ತಲಾಘವ ಬಹಿರಂಗವಾಗಿದ್ದು, ಅವನ ಬ್ಯಾಗಿನಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿದೆ. ಹಣದ ಪ್ರಮಾಣ ಬಹಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ನಗದು ಎಣಿಸಲು ವಿಶೇಷ ಯಂತ್ರವನ್ನು ಸ್ಥಳಕ್ಕೇ ತರಿಸಿದ್ದಾರೆ.
ಈ ದಾಳಿಗೆ ಲೋಕಾಯುಕ್ತ ಎಸ್‌ಪಿ ಆಂಟೋನಿ ಜಾನ್ ನೇತೃತ್ವ ವಹಿಸಿದ್ದರು. ಕಚೇರಿಯ ಇತರ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಕೋಲಾರ: ಆಂಧ್ರ ಪ್ರದೇಶ ಪೊಲೀಸರು ಚಿನ್ನದ ರಾಬರಿ ಪ್ರಕರಣದಲ್ಲಿ ಕೆಜಿಎಫ್ ಮೂಲದ ಕಾಂಗ್ರೆಸ್ ಮುಖಂಡನನ್ನು ಬಂಧಿಸಿರುವ ಘಟನೆ ರಾಜ್ಯ ರಾಜಕೀಯ…
ಪುತ್ತೂರು: ಪಿಯುಸಿ ಓದುತ್ತಿದ್ದ ಬಾಲಕಿ ಮೇಲೆ ಆಟೋ ಚಾಲಕನೊಬ್ಬ ದೌರ್ಜನ್ಯ ಎಸಗಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ರಜೆ…
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಅಸ್ತಾಪನಹಳ್ಳಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 4 ರಂದು…
ಬಂಗಾರಪೇಟೆ: ದಿನಾಂಕ 05.04.2025 ರಂದು ಮಧ್ಯ ರಾತ್ರಿ 12.30 ಗಂಟೆ ಸಮಯದಲ್ಲಿ ಹುದುಕುಳ ಗೇಟ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ…
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಾನವೀಯತೆಯೆಂಬ ಮೌಲ್ಯವೇ ಪ್ರಶ್ನೆಗೆ ಒಳಪಡಿಸುವ ದುರ್ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳ…
ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆದೇಶ ಹೊರಡಿಸಿದ್ದಾರೆ.…