ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅರಬೈಲ ಘಟ್ಟದ ಬಳಿ ಈ ಘಟನೆ ನಡೆದಿದೆ. ಮುಂಬೈ ಕಡೆಯಿಂದ ಕೇರಳದ ಕಡೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಚಲಿಸುತ್ತಿರುವ ಲಾರಿ ಇದ್ದಕ್ಕಿದ್ದಂತೆ ಹಿಂಬದಿಯ ಟೈರ್ ಏಕ ಏಕಿ ಒಡೆದು ಹೋಗಿದ್ದು ಆ ಸಮಯದಲ್ಲಿ ಲಾರಿಗೆ ಬೆಂಕಿ ತಗುಲಿ ಪೂರ್ತಿ ಲಾರಿ ಹೊತ್ತಿ ಉರಿದಿದೆ.ಲಾರಿಯಲ್ಲಿ ಸಾಕಷ್ಟು ಲಕ್ಷಾಂತರ ಮೌಲ್ಯದ ಸರಕು ಇದ್ದಿದ್ದು ಎಲ್ಲವೂ ಬೆಂಕಿಯಲ್ಲಿ ಭಸ್ಮವಾಗಿದೆ.ತಕ್ಷಣ ಅಲ್ಲಿನ ಸ್ಥಳೀಯರು ಸೇರಿ ಪೋಲೀಸ್ ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು.ಸ್ಥಳಕ್ಕೆ ಬಂದ ಅಗ್ನಿಶಾಮಕ ಅಧಿಕಾರಿಗಳು ಪೋಲೀಸ್ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ.ಶ್ರೀಪಾದ್ ಎಸ್ ಏಚ್