Crime

17 ವರ್ಷದ ಯುವತಿಯನ್ನು ಕತ್ತು ಸೀಳಿ ಹತ್ಯೆ ಮಾಡಿದ ಪ್ರೇಮಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ 17 ವರ್ಷದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಸೋಮವಾರ (ಮಾರ್ಚ್ 10) ನಡೆದಿದೆ. ಈ ಕೃತ್ಯಕ್ಕೆ ಆರೋಪಿ ಶಿವಂ ವರ್ಮ ಎಂದು ಗುರುತಿಸಲಾಗಿದ್ದು, ಆತ ಕೊಲೆ ಮಾಡಿದ ಬಳಿಕ ಸಂತ್ರಸ್ತೆಯ ಸ್ನೇಹಿತೆಗೆ ಕರೆ ಮಾಡಿ “ನಿನ್ನ ಸ್ನೇಹಿತೆಯನ್ನು ಕೊಂದಿದ್ದೇನೆ” ಎಂದು ಹೇಳಿದ್ದಾನೆ.

ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಹತ್ಯೆ

ಪೊಲೀಸರ ಪ್ರಕಾರ, ಸಂತ್ರಸ್ತೆ ಸೋಮವಾರ ಮಧ್ಯಾಹ್ನ ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ತೆರಳಿದ್ದಳು. ಈ ವೇಳೆ, ಆಕೆಯ ಪ್ರೇಮಿ ಶಿವಂ ವರ್ಮನನ್ನು ಭೇಟಿಯಾಗಿ, ಆತ ಬೈಕ್‌ನಲ್ಲಿ ಬಂದು ತನ್ನ ಬಾಡಿಗೆ ಮನೆಯ ಕಡೆಗೆ ಆಹ್ವಾನಿಸಿದನು. ಯುವತಿ ಆತನೊಂದಿಗೆ ಹೋಗಿದಳು, ಆದರೆ ಆಕೆಯ ಸ್ನೇಹಿತೆ ಮಾತ್ರ ಮನೆಗೆ ಮರಳಿದಳು.

ಕೇವಲ ಒಂದು ಗಂಟೆ ಬಳಿಕ, ಶಿವಂ ವರ್ಮ ಆಕೆಯ ಸ್ನೇಹಿತೆಗೆ ಕರೆ ಮಾಡಿ, “ಅವಳು ನಂಬಿಕೆ ಇಲ್ಲದವಳು” ಎಂದು ಹೇಳಿ, ತಕ್ಷಣ ಕರೆ ಕಡಿತಗೊಳಿಸಿದ್ದಾನೆ. ಇದೇ ಸಂದೇಶವನ್ನು ಆಕೆಯ ತಂದೆಗೆ ಕರೆ ಮಾಡಿ ತಿಳಿಸಿದ್ದಾನೆ, ಆಘಾತಗೊಂಡ ತಂದೆ ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ, ತನ್ನ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರು ಮಾಹಿತಿ ನೀಡಿದನು.

ಶೋಧ ಕಾರ್ಯ ಮತ್ತು ತನಿಖೆ

ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ, ಕೊಲೆ ಮಾಡಲು ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಲು ಕುಟುಂಬ ಸದಸ್ಯರು ಆರಂಭದಲ್ಲಿ ವಿರೋಧಿಸಿದರು. ಸುಮಾರು ಎರಡು ಗಂಟೆಗಳ ವಾದ-ವಿವಾದದ ನಂತರ, ಪೊಲೀಸರು ಅವರನ್ನು ಮನವೊಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಆರೋಪಿ ಕುರಿತು ಕುಟುಂಬದ ಗಂಭೀರ ಆರೋಪ

ಸಂತ್ರಸ್ತೆಯ ತಂದೆಯ ಪ್ರಕಾರ, ಶಿವಂ ವರ್ಮ ಬಾಡಿಗೆ ಮನೆಯಲ್ಲಿ ಹಲವಾರು ಬಾರಿ ಯುವತಿಗಳನ್ನು ಕರೆತರುವ ಬಗ್ಗೆ ಮನೆಯ ಮಾಲೀಕರಿಗೂ ಗೊತ್ತಿತ್ತು. ಮನೆಯ ಮಾಲೀಕರ ಮಗ ಸಂದೀಪ್ ಶರ್ಮ ಕೂಡ ಇದೇ ಹೇಳಿಕೆಯನ್ನು ನೀಡಿದ್ದಾರೆ. ಈ ಘಟನೆ ಕುರಿತು ವಿಧಿವಿಜ್ಞಾನ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಂತ್ರಸ್ತೆಯ ತಂದೆ, “ನನ್ನ ಮಗಳಿಗೆ ನ್ಯಾಯ ಬೇಕು” ಎಂದು ಆಗ್ರಹಿಸಿದ್ದಾರೆ. ದಕ್ಷಿಣ ಡಿಸಿಪಿ ಆಶಿಶ್ ಶ್ರೀವಾಸ್ತವ ಈ ಬಗ್ಗೆ ಪ್ರತಿಕ್ರಿಯಿಸಿ, “ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲಾಗದು” ಎಂದು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಪಾರ್ಟ್ಮೆಂಟ್ ನಲ್ಲಿ ವೇಶ್ಯಾವಾಟಿಕೆ; ದೂರು ನೀಡಿದ ನಿರ್ದೇಶಕನ ಪತ್ನಿ.

ಚೆನ್ನೈನ ಐಯ್ಯಪ್ಪಂತಂಗಲ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಸಂಕೀರ್ಣವೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ರಾಜು ಮುರುಗನ್ ಅವರ…

32 minutes ago

ನಕಲಿ ಸಹಿಯ ಮೂಲಕ ವಿಚ್ಛೇದನ: ಪತಿಗೆ ಕೋರ್ಟ್ ಆವರಣದಲ್ಲೇ ಪತ್ನಿಯಿಂದ ಥಳಿತ

ನಗರದ ಶಾಂತಿನಿಕೇತನ ಕಾಲೋನಿಯ ಲಲಿತಾ ಎಂಬ ಮಹಿಳೆ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವೇಳೆ, ಪತಿ ಕಳೆದ ವರ್ಷವೇ ವಿಚ್ಛೇದನ…

34 minutes ago

ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣ: 23 ಜನರು ದೋಷಿ ಎಂದು ನ್ಯಾಯಾಲಯ ತೀರ್ಪು

ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 23 ಮಂದಿಯನ್ನು…

3 hours ago

ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಮೇಲೆ ಅತ್ಯಾಚಾರ ಮತ್ತು ದಾಳಿಯ ಪರಿಣಾಮ: ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

ಹಂಪಿ ಮತ್ತು ಆನೆಗೊಂದಿ ಪ್ರದೇಶದಲ್ಲಿ ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಬಳಿಕ, ಈ…

3 hours ago

ರಷ್ಯಾದ ಮೇಲೆ ಉಕ್ರೇನ್‌ ರಣಕಹಳೆ: ಮಾಸ್ಕೋ ಸೇರಿದಂತೆ 10 ಪ್ರದೇಶಗಳ ಮೇಲೆ ಭಾರೀ ಡ್ರೋನ್ ದಾಳಿ

ರಷ್ಯಾ-ಉಕ್ರೇನ್‌ ಯುದ್ಧ ತೀವ್ರಗೊಳ್ಳುತ್ತಲೇ ಇದ್ದು, ಉಕ್ರೇನ್‌ ರಷ್ಯಾದ ರಾಜಧಾನಿ ಮಾಸ್ಕೋವಿನ ವಿರುದ್ಧ ಭಾರೀ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ…

3 hours ago

ತೆಲಂಗಾಣದಲ್ಲಿ ದುರ್ಘಟನೆ: ಆರ್ಥಿಕ ಸಂಕಷ್ಟದ ನಡುವೆ ದಂಪತಿ ಮಕ್ಕಳನ್ನು ಕೊಂದು ಆತ್ಮಹತ್ಯೆ

ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ದಂಪತಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಕೊಂದು, ನಂತರ ನೇಣು…

3 hours ago